ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಯಕ್ಷೋತ್ಸವ ಸಮಿತಿ ವತಿಯಿಂದ ಅ.29 ರಂದು ಬೆಳ್ತಂಗಡಿಯಲ್ಲಿ ” ಯಕ್ಷೋತ್ಸವ ” ಕಾರ್ಯಕ್ರಮ.ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೇರಿ ವಿವಿಧ ಗಣ್ಯರ ಭಾಗವಹಿಸುವಿಕೆ.

0

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಯಕ್ಷೋತ್ಸವ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಅ.29 ರಂದು ಗುರುವಾರ ಬೆಳ್ತಂಗಡಿಯ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನ ವಠಾರದ ಸಮಾಜ ಮಂದಿರದಲ್ಲಿ ” ಯಕ್ಷೋತ್ಸವ ” ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಶರತ್ ಕೃಷ್ಣ ಪಡ್ವೆಟ್ನಾಯ ಉಜಿರೆ ಉದ್ಘಾಟಿಸಲಿದ್ದಾರೆ.ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಿ.ಹರ್ಷೇಂದ್ರ ಕುಮಾರ್ ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಯು.ಟಿ.ಖಾದರ್, ರಮಾನಾಥ ರೈ, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಅಭಯಚಂದ್ರ ಜೈನ್, ಹರೀಶ್ ಕುಮಾರ್, ಪದ್ಮರಾಜ್ ಆರ್ ಪೂಜಾರಿ, ರಕ್ಷಿತ್ ಶಿವರಾಮ್, ಸುಮಂತ್ ಕುಮಾರ್ ಜೈನ್, ಹೇಮಂತ್ ಕುಮಾರ್ ಗೇರುಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತಲ್ಲೂರು ಶಿವರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.ಪೂರ್ವಾಹ್ನ 11 ಗಂಟೆಗೆ ಮಕ್ಕಳ ಯಕ್ಷಗಾನ, ಅಪರಾಹ್ನ 1 ಗಂಟೆಗೆ ಯಕ್ಷಗಾನ ನಾಟ್ಯ ವೈಭವ, 2 ಗಂಟೆಗೆ ಯಕ್ಷಗಾನ ತಾಳಮದ್ದಳೆ, ಸಂಜೆ 4:30 ಗಂಟೆಗೆ ಮಹಿಳಾ ಯಕ್ಷಗಾನ, ರಾತ್ರಿ 8 ಗಂಟೆಗೆ ಪೌರಾಣಿಕ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಲಿದೆ.

ಯಕ್ಷೋತ್ಸವ ಸಮಿತಿ ಕಾರ್ಯಾದ್ಯಕ್ಷರಾದ ಡಾ.ಜಯಕೀರ್ತಿ ಜೈನ್, ಕಾರ್ಯದರ್ಶಿ ರಾಘವ ಹೆಚ್ ಗೇರುಕಟ್ಟೆ, ಅಕಾಡೆಮಿ ಸದಸ್ಯರಾದ ದಯಾನಂದ ಪಿ ಬೆಳಾಲು ಸೇರಿದಂತೆ ರಾಜ್ಯ ಅಕಾಡೆಮಿ ಸದಸ್ಯರು ಹಾಜರಿರುತ್ತಾರೆ.

LEAVE A REPLY

Please enter your comment!
Please enter your name here