ಸಾಯಿರಾಮ್ ಫ್ರೆಂಡ್ಸ್‌ನಿಂದ ಎರಡನೇ ಮನೆ ನಿರ್ಮಾಣ: ಶಾಸಕ ಹರೀಶ್ ಪೂಂಜರಿಂದ ಗುದ್ದಲಿ ಪೂಜೆ

0

ಗುರುವಾಯನಕೆರೆ: ಶಕ್ತಿನಗರದ ಸಾಯಿರಾಮ್ ಫ್ರೆಂಡ್ಸ್ (ರಿ.) ವತಿಯಿಂದ ಬರಾಯದ ಕಮಲ ಅವರಿಗಾಗಿ ನಿರ್ಮಿಸಲಾಗುತ್ತಿರುವ ನೂತನ ಮನೆಯ ಗುದ್ದಲಿ ಪೂಜೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು.

ಸಾಯಿರಾಮ್ ಫ್ರೆಂಡ್ಸ್ ವತಿಯಿಂದ ಅಸಹಾಯಕ ಕುಟುಂಬವೊಂದಕ್ಕೆ ನಿರ್ಮಿಸಿಕೊಡಲಾಗುತ್ತಿರುವ ಎರಡನೇ ಮನೆಯಿದು. ಮನೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಅವರು ₹5 ಲಕ್ಷ ನೆರವು ನೀಡಿದ್ದು, ಸಾಯಿರಾಮ್ ಫ್ರೆಂಡ್ಸ್‌ನ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಸಾಯಿರಾಮ್ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಸುನೀಶ್ ಕುಮಾರ್ ಅರಮಲೆಬೆಟ್ಟ, ಪುರಂದರ ಶೆಟ್ಟಿ ಪಾಡ್ಯಾರು, ಉದ್ಯಮಿ ಪ್ರದೀಪ್ ಶೆಟ್ಟಿ ವಾತ್ಸಲ್ಯ, ಕುವೆಟ್ಟು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರು ಹಾಗೂ ಸಾಯಿರಾಮ್ ಫ್ರೆಂಡ್ಸ್‌ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here