ಚರ್ಮರೋಗ ಸ್ನಾತಕೋತ್ತರ ಪದವಿಯಲ್ಲಿ ಡಾ. ಪ್ರಜ್ಞಾ ಕೆ ಕೆ ಅವರಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್

0

ಬೆಳ್ತಂಗಡಿ: ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ತಾಲೂಕಿನ ಬೆಳಾಲಿನ ಡಾ. ಪ್ರಜ್ಞಾ ಕೃಷ್ಣಕುಮಾರ್ ಕೇವಳ ಅವರು ರಾಜ್ಯಕ್ಕೆ 5ನೇ ರ‍್ಯಾಂಕ್ ಗಳಿಸಿದ್ದಾರೆ.

ಶ್ರೀ ಕೃಷ್ಣಕುಮಾರ್ ಕೇವಳ ಹಾಗೂ ಶ್ರೀಮತಿ ಭವಾನಿ ದಂಪತಿಯ ಎರಡನೇ ಪುತ್ರಿಯಾದ ಪ್ರಜ್ಞಾ, ಬಾಲ್ಯದಿಂದಲೂ ಓದಿನಲ್ಲಿ ಮುಂಚೂಣಿಯಲ್ಲಿ ಇದ್ದು 2016ರಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಆರಂಭಿಸಿದ ಅವರು, 2022ರಲ್ಲಿ ಏಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು. ಅದೇ ಸಾಲಿನ ‘ಬೆಸ್ಟ ಔಟ್ ಗೊಯಿಂಗ್ ಸ್ಟೂಡೆಂಟ್’ ಪ್ರಶಸ್ತಿ ಗಳಿಸಿರುತ್ತಾರೆ.

2023ರ ನೀಟ್ ಪಿಜಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 634ನೇ ರ‍್ಯಾಂಕ್ ಗಳಿಸಿದ ಪ್ರಜ್ಞಾ, ಬೆಂಗಳೂರಿನ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಷಯದ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶ ಪಡೆದರು.

ಇದೀಗ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆಯುವ ಮೂಲಕ ಶೈಕ್ಷಣಿಕ ಸಾಧನೆ ಮುಂದುವರಿಸಿದ್ದಾರೆ.2024ರಲ್ಲಿ ಬೆಳಾಲಿನ ಪ್ರತಿಷ್ಠಿತ ಮನೆತನದ ಹೆಚ್. ಪದ್ಮ ಗೌಡ ಹಾಗೂ ಕನ್ನಿಕಾ ದಂಪತಿಯ ಪುತ್ರ ಡಾ. ರಜತ್ ಹೆಚ್.ಪಿ. (ಎಂಬಿಬಿಎಸ್, ಎಂಎಸ್) ಅವರನ್ನು ವಿವಾಹವಾದರು. ತಮ್ಮ ಮುಂದಿನ ವೈದ್ಯಕೀಯ ಸೇವೆಯನ್ನು ಉಜಿರೆ–ಬೆಳ್ತಂಗಡಿಯಲ್ಲಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಅವರ ಸಾಧನೆಯನ್ನು ಗೌರವಿಸಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಅವರಿಗೆ ದೇವರು ಆಯುರಾರೋಗ್ಯ ಹಾಗೂ ಸಕಲ ಸೌಭಾಗ್ಯ ಕರುಣಿಸಲಿ ಎಂದು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here