ಕರ್ನಾಟಕ ಉಚ್ಛ ನ್ಯಾಯಾ ಲಯದ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ ಅವರಿಗೆ ಧೀಮತಿ ಮಹಿಳಾ ಸಮಾಜದ ವತಿಯಿಂದ ಗೌರವ ಸಮರ್ಪಣೆ

0

ಬೆಳ್ತಂಗಡಿ :ಕರ್ನಾಟಕದ ನ್ಯಾಯಾ oಗ ಕ್ಷೇತ್ರದಲ್ಲಿ ತನ್ನ ಅಪ್ರತಿಮ ಸೇವೆ, ಸುಧೀರ್ಘವಾದ ಅನುಭವ, ಜ್ಞಾನ, ಭದ್ಧತೆ ಯ ಮೂಲಕ ಇತಿಹಾಸ ಸ್ರಷ್ಟಿಸಿದ ಅಪೂರ್ವ ವ್ಯಕ್ತಿತ್ವ ಶ್ರೀಮತಿ ಉಷಾರಾಣಿ ಅವರದ್ದು,ಬೆಳ್ತಂಗಡಿ ತಾಲೂಕು, ಪಡoಗಡಿ, ನಡಿ ಬೆಟ್ಟು ಗುತ್ತು, ಜೈನ ಮನೆತನದ ಮಾನ್ಯರು ಉತ್ತಮ ಜೀವನ ಮೌಲ್ಯ, ಜೀವನ ಕೌಶಲ್ಯ, ಶಿಸ್ತು, ಧಾರ್ಮಿಕ ಹಿನ್ನೆಲೆ, ಸಾಧನೆಯ ಮೂಲಕ ಬೆಳೆದು ಬಂದವರು,ಸಿವಿಲ್ ಜಡ್ಜ್ ಆಗಿ ವಿವಿಧ ತಾಲೂಕು ಮತ್ತು ಜಿಲ್ಲಾ ಕೇoದ್ರ ಗಳಲ್ಲಿ ಕಾರ್ಯನಿರ್ವಹಿಸಿ, ಇದೀಗ ಕರ್ನಾಟಕ ಉಚ್ಛ ನ್ಯಾಯಲಯದ ನ್ಯಾಯಮೂರ್ತಿ ಆಗಿ ನೇಮಕ ಗೊಂಡಿರುವದು ಬೆಳ್ತಂಗಡಿ ತಾಲೂಕಿಗೆ, ನಮ್ಮ ರಾಜ್ಯಕ್ಕೆ,ಹೆಮ್ಮೆಯ ವಿಚಾರ ಆಗಿದೆ, ಈ ಹಿನ್ನಲೆಯಲ್ಲಿ ಧೀಮತಿ ಮಹಿಳಾ ಸಮಾಜ, ಉಜಿರೆ ಇದರ ಅಧ್ಯಕ್ಷರಾದ ಶ್ರಿಮತಿ ಅಶ್ವಿನಿ ಪ್ರವೀಣ್ ಕುಮಾರ್ ಇವರ ನೇತೃತ್ವದಲ್ಲಿ ಸುಮಾರು ಮೂವತ್ತ ಕಿಂತಲೂ ಮಿಕ್ಕಿ ಸದಸ್ಯರು ಆಗಮಿಸಿ,ಶ್ರೀಮತಿ ಉಷಾರಾಣಿ ಅವರ ಸ್ವಗ್ರಹ ನಡಿಬೆಟ್ಟು ಗುತ್ತು ನಲ್ಲಿ ಗೌರವಿಸಿದರು.

ಈ ಸಂದರ್ಭದಲ್ಲಿ ಅವರ ಬಾಲ್ಯದ ಜೀವನ, ತಂದೆ ತಾಯಿಯ ಪ್ರೊತ್ಸಾಹ, ಮಾರ್ಗದರ್ಶನ,ಜೈನ ಧರ್ಮದ ಪಂಚಾನು ವ್ರತಗಳು, ತತ್ವ, ಸಿದ್ಧಾಂತ ಗಳ ಬಗ್ಗೆ, ತಮ್ಮ ಅನಿಸಿಕೆ ಹಂಚಿ ಕೊಂಡು, ಸಂತೋಷ ವ್ಯಕ್ತ ಪಡಿಸಿದರು.

LEAVE A REPLY

Please enter your comment!
Please enter your name here