ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ

0

ಮುಂಡೂರು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಂಡೂರು, ಶ್ರೀ ಶಾರದಾಂಬ ಭಜನಾ ಮಂಡಳಿ ಮುಂಡೂರು, ಶ್ರೀ ಶಾರದಾಂಬ ಯುವಕ ಮಂಡಲ (ರಿ) ಮುಂಡೂರು ಇದರ ಜಂಟಿ ಆಶ್ರಯದಲ್ಲಿ ಅ. 11 ರಿಂದ 9 ದಿನದ ನವರಾತ್ರಿ ಪೂಜೆ ಮತ್ತು ಭಜನಾ ಕಾರ್ಯಕ್ರಮವು ಶ್ರೀ ದೇವಿಯ ಸನ್ನಿಧಿಯಲ್ಲಿ ನಡೆಯುತ್ತಿದ್ದು, 8 ನೇ ದಿವಸ ಅ. 18 ರಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಶ್ರೀಧರ ಅಂಚನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಮತ್ತು ಖ್ಯಾತ ದಂತ ವೈದ್ಯ ಡಾ| ಎಂ.ಎಂ. ದಯಾಕರ ಭಟ್ ಇವರು ಎಸ್. ಎಸ್. ಎಲ್. ಸಿ. ಹಾಗೂ ಪಿಯುಸಿ ಮತ್ತು ಉನ್ನತ ಶಿಕ್ಷಣದಲ್ಲಿ ಉನ್ನತ ಮತ್ತು ಅತ್ಯುನ್ನತ ಅಂಕ ಪಡೆದಿರುವ ಸುಮಾರು 15 ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಿ ಪ್ರೋತ್ಸಾಹದ ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ವಾಂಸ, ಧನ್ಯಾ, ನವಮಿ ಎಂ. ಅಲೆವೂರಾಯ, ನಮೃತಾ ಎಂ. ಅಲೆವೂರಾಯ, ತೃಷ ಎಂ. ಪೂಜಾರಿ, ದೀಪ್ತಿ, ಮನ್ವಿತ್ ಎಂ. ಪೂಜಾರಿ, ಮನಸ್ವಿ, ಯಶಸ್ವಿ ಆರ್. ಸಾಲಿಯಾನ್, ಡಾ| ಪ್ರಣಮ್ಯ, ಸುಭಿಕ್ಷಾ ವಿ.ಪೂಜಾರಿ, ಶ್ರೇಯಾ, ಶ್ರೇಯಸ್ ಹೆಗ್ಡೆ, ಅನ್ವಿತಾ, ಪಲ್ಲವಿ ಇವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮಾನಂದ ಸಾಲಿಯಾನ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ ಸಾಲಿಯಾನ್, ಪ್ರಧಾನ ಅರ್ಚಕ ಅರವಿಂದ ಭಟ್ ಎಂ., ಮಹಮ್ಮಾಯಿ ಸೇವಾ ಸಮಿತಿ ಕೋಟಿಕಟ್ಟೆಯ ಗೌರವ ಅಧ್ಯಕ್ಷ ಗುರುವಪ್ಪ ಸಾಲಿಯಾನ್, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಚಾಮರಾಜ ಸೇಮಿತ, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಾಬು ಎ., ಭಜನಾ ಮಂಡಳಿಯ ಕಾರ್ಯದರ್ಶಿ ಕೇಶವ ಮೂಲ್ಯ, ಕೋಶಾಧಿಕಾರಿ ಆನಂದ ಆಚಾರ್ಯ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಕರ್ನಾಟಕ ರಾಜ್ಯ ಮಿನಿ ಒಲಂಪಿಕ್ಸ್ ಕಬಡ್ಡಿ ಚಾಂಪಿಯನ್ ಶಿಪ್ 2026 ಕಬಡ್ಡಿ ಪಂದ್ಯಾವಳಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕು. ರಿಷಿಕಾ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಮಾನಂದ ಸಾಲಿಯಾನ್ ಸ್ವಾಗತಿಸಿ, ಕೇಶವ ಮೂಲ್ಯ ಧನ್ಯವಾದವಿತ್ತು, ಸುರೇಶ್ ಶೆಟ್ಟಿ ಹುಣಿಂಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here