ಕಳಿಯ ಪತಂಜಲಿ ಯೋಗ ಶಾಖೆಯಲ್ಲಿ ನವರಾತ್ರಿ ಆಚರಣೆ

0

ಬೆಳ್ತಂಗಡಿ: ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರ ಮಂಗಳೂರು ವಲಯಡ ಕಳಿಯ ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ನವರಾತ್ರಿಯ ಆಚರಣೆ ವಿಶಿಷ್ಟವಾಗಿ ನಡೆಯಿತು.ನವರಾತ್ರಿಯ ಆರಂಭದಿಂದ ಮಹಾನವಮಿಯ ವರೆಗೆ ದುರ್ಗಾದೇವಿಯ ವಿವಿಧ ರೂಪಗಳ ವಿಶೇಷತೆಗಳ ಬಗ್ಗೆ ಪ್ರತಿದಿನ ಯೋಗಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ವ್ಯಾಖ್ಯಾನ ನೀಡಿದರು.

ವಿಶೇಷ ಯೋಗ ಪ್ರಾತ್ಯಕ್ಷಿಕೆಯನ್ನು ಶಿಕ್ಷಕಿ ಪ್ರೇಮಲತಾ ನಡೆಸಿಕೊಟ್ಟರು. ಶ್ರೀ ಕಾಳಿಕಾಂಬ ಯಕ್ಷಕಲಾ ಪ್ರತಿಷ್ಠಾನ ರಿ.ಉಪ್ಪಿನಂಗಡಿ ಇದರ ಮಹಾಭಾರತ ಸರಣಿಯ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಯೋಗ ಬಂಧುಗಳಿಗೆ ನವದುರ್ಗ ಪುಸ್ತಕವನ್ನು ವಿತರಿಸಲಾಯಿತು.

ಸಹಶಿಕ್ಷಕ ಸುಕೇಶ, ಸಂಚಾಲಕ ವಿಜಯ, ವಕ್ತಾರ ಕೇಶವ, ಶಿವಣ್ಣ ಅಶೋಕ, ಸತೀಶ, ಭಾರತಿ ಪದ್ಮಲತಾ ಅರುಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here