ಶಿಬಾಜೆ: ಮನೆಗೆ ಸಿಡಿಲು ಬಡಿದು ಗೃಹೋಪಯೋಗಿ ವಸ್ತುಗಳಿಗೆ ಹಾನಿ; ಕೋಳಿ ಸಾವು

0

ಶಿಬಾಜೆ: ಅ. 15ರಂದು ಸಾಯಂಕಾಲ ಸಿಡಿಲು ಬಡಿದು ಮನೆಯಲ್ಲಿದ್ದ ಟಿವಿ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿ, ಕೋಳಿ ಮೃತಪಟ್ಟ ಘಟನೆ ಶಿಬಾಜೆ ಗ್ರಾಮದ ಬಂಡಿಹೊಳೆಯಲ್ಲಿ ನಡೆದಿದೆ.

ಬಂಡಿಹೊಳೆ ನಿವಾಸಿ ಗಣೇಶ್ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ ಟಿವಿ ಹಾಗೂ ಗೃಹಬಳಕೆಯ ಅನೇಕ ವಸ್ತುಗಳು ಹಾನಿಗೊಂಡಿವೆ. ಇದೇ ವೇಳೆ ಸಾಕಿದ್ದ ಕೋಳಿಗೂ ಸಿಡಿಲು ಬಡಿದು ಮೃತಪಟ್ಟಿದೆ.

ಸ್ಥಳದಲ್ಲಿ ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದ ಸದಸ್ಯರು ಹಾಗೂ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ದಿನಕರ್ ಕುರುಪ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಹಕಾರ ನೀಡುತಿದ್ದಾರೆ.

LEAVE A REPLY

Please enter your comment!
Please enter your name here