ಸೋಜಾ ಎಲೆಕ್ಟ್ರಾನಿಕ್ಸ್ ನ ಆಕಾಶ್ ಮಾಸಿಕ ಉಳಿತಾಯ ಯೋಜನೆಯ ಕೂಪನ್ ಕನ್ಯಾಡಿ ಶ್ರೀ ರಾಮಕ್ಷೇತ್ರದಲ್ಲಿ ಅಧಿಕೃತ ಬಿಡುಗಡೆ

0

ಬೆಳ್ತಂಗಡಿ: ದಕ್ಷಿಣದ ಅಯೋಧ್ಯ ಶ್ರೀ ರಾಮಕ್ಷೇತ್ರ ಕನ್ಯಾಡಿಯ ಸದ್ಗುರು ಶ್ರೀ 1008 ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ದಿವ್ಯ ಹಸ್ತದಿಂದ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಪರಿಚಯಿಸುತ್ತಿರುವ ಆಕಾಶ್ ಮಾಸಿಕ ಉಳಿತಾಯ ಯೋಜನೆಯ ಕೂಪನನ್ನು ಅ.14ರಂದು ಅಧಿಕೃತವಾಗಿ ಗ್ರಾಹಕರ ಉಪಯೋಗಕ್ಕೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸೋಜಾ ಸಂಸ್ಥೆಯ ಆಡಳಿತ ನಿರ್ದೇಶಕ ಅಲ್ಫೋನ್ಸ್ ಫ್ರಾಂಕೋ, ಇಂಜಿನಿಯರ್ ರಾಹುಲ್, ಮತ್ತು ಸಂಸ್ಥೆಯ ಮ್ಯಾನೇಜರ್ ಲ್ಯಾನ್ಸಿ ಡಿಸೋಜಾರವರು ಜೊತೆಗಿದ್ದು ಅಲ್ಫೋನ್ಸ್ ಫ್ರಾಂಕೋರವರನ್ನು ಶಾಲು ಹೊದಿಸಿ ಸನ್ಮಾನಿಸಿ, ದೇವರ ಪ್ರಸಾದವನ್ನು ನೀಡಿ ಶುಭಕೋರಿದರು. ಹಾಗೂ ತನ್ನ ಆಶೀರ್ವಾದವನ್ನು ನೀಡಿ ಸೋಜಾ ಸಂಸ್ಥೆಯ ಬೆಳವಣಿಗೆಗೆ ನನ್ನ ಪ್ರಾರ್ಥನೆ ಸದಾ ಇರುತ್ತದೆ ಎಂದು ಹೇಳಿ ಆಶೀರ್ವದಿಸಿದರು.

LEAVE A REPLY

Please enter your comment!
Please enter your name here