​ಖಾಸಗಿ ಬಸ್ ನೌಕರರ ಸಂಘದಿಂದ ಮೃತರ ಕುಟುಂಬಕ್ಕೆ ಧನಸಹಾಯ

0

ಬೆಳ್ತಂಗಡಿ : ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು, ನೌಕರರ ಹಿತರಕ್ಷಣೆ ಹಾಗೂ ಸೌಲಭ್ಯಗಳನ್ನು ಒದಗಿಸುವ ಮೂಲಕ ಬೆಳ್ತಂಗಡಿ-ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ನೌಕರರ ಸಂಘದ ವತಿಯಿಂದ ಅಗಲಿದ ಚಾಲಕರ ಕುಟುಂಬಕ್ಕೆ ಸಾಂತ್ವನ ಮತ್ತು ಧನಸಹಾಯ ನೀಡಲಾಯಿತು.​

ಖಾಸಗಿ ಬಸ್ ನೌಕರರ ಸಂಘದ ಸಕ್ರಿಯ ಸದಸ್ಯರಾಗಿ, ಚಾಲಕ ವೃತ್ತಿ ನಡೆಸುತ್ತಿದ್ದ ಗೇರುಕಟ್ಟೆ ಸಮೇಪದ ರೇಷ್ಮೆ ರೋಡ್ ನಿವಾಸಿ ಗೋಪಾಲ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಿಕ್ ಕೆಂಪಿ ಅವರ ನೇತೃತ್ವದಲ್ಲಿ ನಿಯೋಗವು ಮೃತರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಂಘದ ವತಿಯಿಂದ ₹10,000 (ಹತ್ತು ಸಾವಿರ ರೂಪಾಯಿ) ಆರ್ಥಿಕ ನೆರವು ಹಸ್ತಾಂತರಿಸಿತು.​

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನಾರಾಯಣ್, ಕೋಶಾಧಿಕಾರಿ ಇಲಿಯಾಸ್ ಹಾಗೂ ಸಾಮಾಜಿಕ ಜಾಲತಾಣದ ಜಯಣ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here