ಪೆರ್ಲ ಬೈಪಾಡಿಯಲ್ಲಿ ವಾಣಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

0

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು, ಹಳೆಕೋಟೆ, ಬೆಳ್ತಂಗಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ (NSS) ವಾರ್ಷಿಕ ವಿಶೇಷ ಶಿಬಿರವು ಅಕ್ಟೋಬರ್ 11ರಿಂದ 17ರವರೆಗೆ ಪೆರ್ಲ ಬೈಪಾಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕುಶಾಲಪ್ಪ ಗೌಡ ವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷರಾದ ಹೆಚ್. ಪದ್ಮಗೌಡ ಅವರು ಶಿಬಿರವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಧರ್ಣಪ್ಪ ಗೌಡ ಬಾನಡ್ಕ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ಹರೀಶ್ ಗೌಡ ಪರಪ್ಪಾಜೆ, ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ. ಹಾಗೂ ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ಉಪಸ್ಥಿತರಿದ್ದರು.

ಗೌರವ ಉಪಸ್ಥಿತರಾಗಿ ನ್ಯೂಸ್ 18ರ ಕನ್ನಡಿಗ 2026 ಪ್ರಶಸ್ತಿ ಪುರಸ್ಕೃತ, ಸಮಗ್ರ ಸಾವಯವ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆ, ಉದ್ಯಮಿ ಜಯಣ್ಣ ಮಿನಂದೇಲು, ಪೆರ್ಲ ಬೈಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಪೆರ್ಲ ಬೈಪಾಡಿ ಅಧ್ಯಕ್ಷ ಉಮೇಶ್ ಅಂಗಡಿ ಮಜಲು, ಸಿದ್ಧಿವಿನಾಯಕ ದೇವಸ್ಥಾನ ಪೆರ್ಲ ಬೈಪಾಡಿ ಅಧ್ಯಕ್ಷ ರಮೇಶ್ ಗೌಡ, ಗೌ. ಯಾ. ಒ ಸಂಘ ಬೆಳ್ತಂಗಡಿಯ ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಎಸ್‌ಕೆಡಿಆರ್‌ಡಿಪಿಯ ವಲಯ ಮೇಲ್ವಿಚಾರಕ ಪ್ರೇಮ್ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ಕಾಡಂಡ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಗೌಡ, ಬಾಲಕೃಷ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಎಂ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಎನ್‌.ಎಸ್‌.ಎಸ್ ಶಿಬಿರಾಧಿಕಾರಿ ದಿನೇಶ್ ಯು. ವಂದನಾರ್ಪಣೆ ಮಾಡಿದರು. ಸಹ ಶಿಬಿರಾಧಿಕಾರಿ ಶ್ರಾವ್ಯ ಎಸ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here