ಕಾರ್ಕಳ: ಅವಿಭಜಿತ ದ ಕ ಜಿಲ್ಲಾ ಮಟ್ಟದ ವಕೀಲರ ಕ್ರೀಡಾ ಕೂಟ: ಬೆಳ್ತಂಗಡಿ ವಕೀಲರ ಸಂಘಕ್ಕೆ ಹಲವು ಬಹುಮಾನ ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ

0

ಕಾರ್ಕಳ ವಕೀಲರ ಸಂಘದ ವತಿಯಿಂದ ಕಾರ್ಕಳದ ಜನಪ್ರಿಯ ನ್ಯಾಯವಾದಿಯಾಗಿದ್ದ ಕೀರ್ತಿಶೇಷ ದಿವಂಗತ ಎಂ ಕೆ ವಿಜಯ ಕುಮಾರ್ ಸ್ಮರಣಾರ್ಥ ಅವರ ಶಿಷ್ಯ ವೃಂದ ಮತ್ತು ಅವರ ಅಭಿಮಾನಿ ಬಳಗದ ವತಿಯಿಂದ ನಡೆದ ಅವಿಭಜಿತ ದ ಕ ಜಿಲ್ಲಾ ಮಟ್ಟದ ವಕೀಲರುಗಳ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ವಕೀಲರ ಸಂಘವು ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆದು ಹಲವು ಬಹುಮಾನಗಳನ್ನು ಪಡೆದುಕೊಂಡಿದೆ.

ಸಂಘದ ಅಧ್ಯಕ್ಷರಾದ ಅಲೋಶಿಯಸ್ ಎಸ್ ಲೋಬೋ ಅವರ ನೇತೃತ್ವದಲ್ಲಿ ಸುಮಾರು 40 ಮಂದಿ ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.ಸಂಘದ ಯುವ ಸದಸ್ಯ ಜೋಬಿ ಜಾಯ್ ನೇತೃತ್ವದ ತಂಡವು ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಅತ್ಲೇಟಿಕ್ ವಿಭಾಗದ 60 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ವೇಗದ ನಡಿಗೆಯಲ್ಲಿ ಸಂಘದ ಹಿರಿಯ ಸದಸ್ಯ ಶಿವಕುಮಾರ್ ಎಸ್ ಎಂ ದ್ವಿತೀಯ ಸ್ಥಾನ, 40 ವರ್ಷ ಕೆಳಗಿನ ಪುರುಷರ ಶಾಟ್ ಪುಟ್ ನಲ್ಲಿ ಜೋಬಿ ಜೋಯ್ ಪ್ರಥಮ, ನಿಶಾಂಕ್ ತೃತೀಯ, ಮಹಿಳಾ ವಿಭಾಗದ ಶಾಟ್ ಪುಟ್ ನಲ್ಲಿ ಪ್ರಮೀಳಾ ಶೆಟ್ಟಿ ತೃತೀಯ ಸ್ಥಾನ, ಪುರುಷರ ರಿಲೇ ಯಲ್ಲಿ ತೃತೀಯ ಸ್ಥಾನ , 200 ಮೀ ರೇಸ್ ನಲ್ಲಿ ಪ್ರಮೀಳಾ ಶೆಟ್ಟಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಕ್ರೀಡಾಕೂಟದಲ್ಲಿ ಸಂಘದ ಅಧ್ಯಕ್ಷರಾದ ಅಲೋಶಿಯಸ್ ಎಸ್. ಲೋಬೋ, ಹಿರಿಯ ಸಮಿತಿ ಅಧ್ಯಕ್ಷ ಶಿವಕುಮಾರ್ ಎಸ್. ಎಂ., ಉಪಾಧ್ಯಕ್ಷರಾದ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ, ಮಾಜಿ ಅಧ್ಯಕ್ಷರುಗಲಾದ ಪ್ರಸಾದ್ ಕೆ. ಎಸ್., ವಸಂತ ಮರಕಡ, ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ ಎ. ಮಾಜಿ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಸಂಘದ ಸದಸ್ಯರುಗಳಾದ ಚಿದಾನಂದ ಪಿ., ಫ್ರಾನ್ಸಿಸ್ ಕೆ. ವಿ. ದಿನೇಶ್ ಶೆಟ್ಟಿ, ವಿನಯ ಕುಮಾರ್ ಎಂ., ಪ್ರವೀಣ್ ಕುಮಾರ್, ಹರ್ಷಿತ್ ಕುಮಾರ್, ಉಮೇಶ್ ದೇವಾಡಿಗ, ಸಂದೀಪ್ ಡಿಸೋಜ, ನವಾಜ್ ಷರೀಫ್, ಇರ್ಷಾದ್, ಜೋಬಿ ಜಾಯ್, ವಿನೋಧರ, ಅಬಿನ್ ಫ್ರಾನ್ಸಿಸ್, ವಸಂತ, ಸುಶಾಂತ್, ಚಿರಾಗ್ ಶೆಟ್ಟಿ, ನಿಶಾಂಕ್, ವಿಕ್ಯಾತ್, ಕಮಲಾಕ್ಷ, ಪ್ರೀತೇಶ್, ದೀಪಕ್, ಪ್ರಮೀಳಾ ಶೆಟ್ಟಿ, ಸಪ್ನಾಜ್, ಪ್ರತೀಕ್ಷಾ, ಶ್ರಾವ್ಯ, ಮನೀಷಾ, ಹೇಮಲತಾ, ಸಾತ್ವಿಕಾ, ಅನುಶ್ರೀ, ಸುಷ್ಮಿತಾ ಮತ್ತು ಫಾತಿಮಾ ಜುವಾ ಅವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here