






ಬೆಳ್ತಂಗಡಿ: ಮರೋಡಿಯ ಐತಿಹಾಸಿಕ ಆಲಡೆ ಕ್ಷೇತ್ರದ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮರದ ಪಲ್ಲಕ್ಕಿ ಮತ್ತು ಚಂದ್ರಮಂಡಲ ರಥದ ನಿರ್ಮಾಣ ಕಾರ್ಯದ ವಿಜ್ಞಾಪನಾ ಪತ್ರವನ್ನು ಅ.11 ರಂದು ಬಿಡುಗಡೆ ಮಾಡಲಾಯಿತು.



ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕಾರ್ಯದರ್ಶಿ ಜಯಂತ ಕೋಟ್ಯಾನ್ ಮತ್ತು ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಮೊಕ್ತೆಸರರು, ಗ್ರಾಮಸ್ಥರು ಉಪಸ್ಥಿತರಿದ್ದರು.









