ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಚಾರ್ಮಾಡಿಯಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

0

ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್, ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ರೇಂಜರ್ಸ್ ವಿಭಾಗ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಚಾರ್ಮಾಡಿ ಶ್ರೀ  ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಶಿಬಿರವನ್ನು ಬೆಳ್ತಂಗಡಿ  ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಕೆ.ವಿ ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ಭಟ್ ಕೋಡಿತ್ತಿಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್  ಕಾರ್ಯದರ್ಶಿ ಡಾ. ರಾಘವೇಂದ್ರ ಪಿದಮಲೆ, ಚಾರ್ಮಾಡಿಯ ನಿವೃತ್ತ ಅಂಚೆಪಾಲಕ ಯಶವಂತ ನಾಯಕ್, ಶ್ರೀ ಕ್ಷೇತ್ರ ಮತ್ರೂರು ಪಂಚಲಿಂಗೇಶ್ವರ ದೇವಸ್ಥಾನದ  ಆಡಳಿತ ಮೊಕ್ತೇಸರ ಯಶೋಧರ ವಳಸಿರಿ, ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್.ವಿಭಾಗದ ಶಿಬಿರಾಧಿಕಾರಿ ನಮಿತಾ ಕೆ.ಆರ್., ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಙ, ರೋಟರಿ ಕ್ಲಬ್  ಸದಸ್ಯ ಡಾ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅನಿಕ್ಷಾ ಪ್ರಾರ್ಥಿಸಿ , ತೇಜಸ್ವಿನಿ ಸ್ವಾಗತಿಸಿದರು. ಜನಿಕ್ಷಾ ಕಾರ್ಯಕ್ರಮ ನಿರೂಪಿಸಿ, ಚಂದನ್ ವಂದಿಸಿದರು. ಉಚಿತ ನೇತ್ರ ತಪಾಸಣೆ ಹಾಗು ಚಿಕಿತ್ಸಾ ಶಿಬಿರದಲ್ಲಿ ಒಟ್ಟು 115 ಜನರ  ನೇತ್ರ ತಪಾಸಣೆ ನಡೆಸಿ,  ಸುಮಾರು 57 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಹಾಗೂ  ಹತ್ತು ಜನರಿಗೆ ಕಣ್ಣಿನ  ಶಸ್ತ್ರಚಿಕಿತ್ಸೆಗಾಗಿ  ಬೆಳ್ತಂಗಡಿಗೆ ಬರುವಂತೆ ಸೂಚಿಸಲಾಯಿತು.  ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ  ಮೇ !ಜ ! ಎಂ.ವಿ.ಭಟ್, ಅನಂತ ಭಟ್ ಮಚ್ಚಿಮಲೆ, ಪ್ರಕಾಶ ನಾರಾಯಣ್ ,ವೆಂಕಟೇಶ್ವರ ಭಟ್ ಮತ್ತಿತರರು  ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here