






ಬೆಳ್ತಂಗಡಿ: ನವಶಕ್ತಿ ಕಾಶಿ ಬಾಬು ಶೆಟ್ಟಿ ಅವರ ಪುಣ್ಯಸ್ಮರಣಾರ್ಥ ಅ.13ರಂದು ನಡೆಯಲಿರುವ ʼಮಾತೃಸ್ಮೃತಿ’ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಅ.8ರಿಂದ ಗುರುವಾಯನಕೆರೆ ನವಶಕ್ತಿ ನಿವಾಸದಲ್ಲಿ ಪ್ರತಿದಿನ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಭಕ್ತಿ, ಸ್ಮರಣೆ ಹಾಗೂ ಮಾತೃವಾತ್ಸಲ್ಯದ ಭಾವವನ್ನು ಒಳಗೊಂಡ ಈ ಭಜನಾ ಕಾರ್ಯಕ್ರಮವನ್ನು ಕಾಶಿ ಬಾಬು ಶೆಟ್ಟಿಯವರ ಹಿರಿಯ ಮಗ ಶ್ರೀನಿವಾಸ್ ಶೆಟ್ಟಿ ಹಾಗೂ ಅವರ ಪತ್ನಿ ಶೋಭಾ ಶ್ರೀನಿವಾಸ್ ಶೆಟ್ಟಿ ಅ.08ರಂದು ಚಾಲನೆ ನೀಡಿದರು.ಅ.8ರಿಂದ ಅ.12ರವರೆಗೆ ಪ್ರತಿದಿನ ವಿವಿಧ ಭಜನಾ ತಂಡಗಳು ನವಶಕ್ತಿ ನಿವಾಸದಲ್ಲಿ ಭಜನಾ ಸೇವೆ ಸಲ್ಲಿಸಲಿದ್ದು, ಅ.13ರಂದು ನಡೆಯಲಿರುವ ಪುಣ್ಯ ಮಾತೃಸ್ಮೃತಿ ಕಾರ್ಯಕ್ರಮಕ್ಕೆ ಈ ಮೂಲಕ ಭಕ್ತಿಪೂರ್ವಕವಾಗಿ ಮುನ್ನುಡಿ ಬರೆಯಲಾಗಿದೆ.
ಕಾಶಿ ಬಾಬು ಶೆಟ್ಟಿ ಅವರ ತಾಯಿಯ ಮೇಲಿನ ಅಪಾರ ಪ್ರೀತಿ, ಗೌರವ ಹಾಗೂ ಕುಟುಂಬದೊಂದಿಗೆ ಅವರಿಗಿದ್ದ ಆತ್ಮೀಯ ಬಾಂಧವ್ಯವನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವಶಕ್ತಿ ಕುಟುಂಬ ಪೂಜ ಕೈಕಂರ್ಯದಲ್ಲಿ ಭಾಗವಹಿಸಿದ್ದರು.









