ಚಾರ್ಮಾಡಿಯಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

0

ಚಾರ್ಮಾಡಿ : ರೋಟರಿ ಕ್ಲಬ್ ಬೆಳ್ತಂಗಡಿ, ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ರೇಂಜರ್ಸ್ ವಿಭಾಗ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.ಶಿಬಿರವನ್ನು ರೋಟರಿ ಕ್ಲಬ್ ನ ಅಧ್ಯಕ್ಷ ಶ್ರೀಧರ ಕೆ.ವಿ. ಉದ್ಘಾಟಿಸಿದರು .

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣ ಭಟ್ ಕೋಡಿತ್ತಿಲ್. ವಹಿಸಿದ್ದರುಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ರಾಘವೇಂದ್ರ ಪಿದಮಲೆ, ಚಾರ್ಮಾಡಿಯ ನಿವೃತ್ತ ಅಂಚೆಪಾಲಕ ಯಶವಂತ ನಾಯಕ್, ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ ಇದರ ಆಡಳಿತ ಮೊಕ್ತೇಸರ ಯಶೋಧರ ವಳಸಿರಿ, ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್.ವಿಭಾಗದ ಶಿಭಿರಾಧಿಕಾರಿ ನಮಿತಾ ಕೆ.ಆರ್. ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಙರೂ, ರೋಟರಿ ಕ್ಲಬ್ ಬೆಳ್ತಂಗಡಿ ಸದಸ್ಯರೂ ಆದ . ಡಾ ರಮೇಶ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಕುಮಾರಿ ಅನಿಕ್ಷಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದರೆ , ಕುಮಾರಿ ತೇಜಸ್ವಿನಿ ಸ್ವಾಗತಿಸಿದರು.ಕುಮಾರಿ ಜನಿಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರೆ , ಚಂದನ್ ಅವರು ವಂದನಾರ್ಪಣೆಗೈದರು.ಈ ಶಿಬಿರದಲ್ಲಿ 115 ಜನರ ಕಣ್ಣನ್ನು ಪರೀಕ್ಷಿಸಲಾತು. ಸುಮಾರು57 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು . ಹಾಗೂ ಹತ್ತು ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಬರುವಂತೆ ಸೂಚಿಸಲಾಯಿತು..ಈ ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ಮೆ.ಜ.(ನಿ) ಎಂ.ವಿ.ಭಟ್, ಅನಂತ ಭಟ್ ಮಚ್ಚಿಮಲೆ, ಪ್ರಕಾಶ ನಾರಾಯಣ್ ,ವೆಂಕಟೇಶ್ವರ ಭಟ್ ಕಜೆ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here