








ಬಳಂಜ: ತೆಂಕಕಾರಂದೂರು ಗ್ರಾಮದ ಆಲಡ್ಕ ಕೆಮಣಬೈಲುಗುತ್ತು ಹೇವ ಲಕ್ಷ್ಮಣ ಪೂಜಾರಿಯವರ ಪತ್ನಿ ರಾಮಕ್ಕು (97ವ) ಅವರು ವಯೋಸಹಜ ಅಸೌಖ್ಯದಿಂದ ಅ.5ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರಾದ ನಾರಾಯಣ ಪೂಜಾರಿ, ರಾಘವ ಪೂಜಾರಿ, ಪ್ರಮೋದ್ ಪೂಜಾರಿ, ಓರ್ವ ಪುತ್ರಿ ನಳಿನಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.








