ಬೆಳ್ತಂಗಡಿ: ಸವಣಾಲು ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ ನವರಾತ್ರಿ ಉತ್ಸವ – ಧಾರ್ಮಿಕ ಕಾರ್ಯಕ್ರಮ

0

ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ಪ್ರಸಿದ್ಧ ‘ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟ’ದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 11ನೇ ರವಿವಾರದಿಂದ ಅಕ್ಟೋಬರ್ 20ನೇ ಮಂಗಳವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ.​

ಉತ್ಸವದ ದಿನಗಳಲ್ಲಿ ಪ್ರತಿದಿನವೂ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ, ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಜರಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಕ್ಷೇತ್ರದ ಆಡಳಿತ ಮಂಡಳಿ ವಿನಂತಿಸಿದೆ.

ಅಕ್ಟೋಬರ್ 11 (ರವಿವಾರ) ರಿಂದ ಅಕ್ಟೋಬರ್ 20 (ಮಂಗಳವಾರ): ನವರಾತ್ರಿ ಉತ್ಸವ ಹಾಗೂ ಪ್ರತಿದಿನ ಚಂಡಿಕಾಹೋಮ, ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ.​ಅಕ್ಟೋಬರ್ 17 (ಶನಿವಾರ): ಶ್ರೀ ಶಾರದ ಪೂಜೆ ಹಾಗೂ ಅಕ್ಷರಾಭ್ಯಾಸ.​ಅಕ್ಟೋಬರ್ 18 (ರವಿವಾರ): ಬೆಳಗ್ಗೆ 09:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವಧಾನ, ರಂಗಪೂಜೆ ಮತ್ತು ವಾಹನ ಪೂಜೆ.​ಅಕ್ಟೋಬರ್ 19 (ಸೋಮವಾರ): ಸಂಜೆ 05:00 ಗಂಟೆಯಿಂದ ವಾಹನ ಪೂಜೆ; ರಾತ್ರಿ ಶ್ರೀ ಮೂಲದುರ್ಗಾ ದೇವಿಗೆ ಅಷ್ಟಾವಧಾನ ಸೇವೆ, ಹೂವಿನ ಪೂಜೆ ಹಾಗೂ ರಂಗ ಪೂಜೆ.​ಅಕ್ಟೋಬರ್ 20 (ಮಂಗಳವಾರ): ಸಾರ್ವಜನಿಕ ಚಂಡಿಕಾಹೋಮ ಹಾಗೂ ಮಹಾ ಅನ್ನಸಂತರ್ಪಣೆ.

​ವಿಶೇಷ ಸೂಚನೆ ಹಾಗೂ ಸೇವಾ ವಿವರಗಳು:​ಸಾರ್ವಜನಿಕ ಚಂಡಿಕಾಹೋಮ: ಸಂಕಲ್ಪ ಮಾಡಲಿಚ್ಛಿಸುವವರು 500 ರೂ.ಗಳಿಕೆ ಒಳಪಟ್ಟು, ಅಕ್ಟೋಬರ್ 20ರ ಬೆಳಗ್ಗೆ 11:00 ಗಂಟೆಯೊಳಗೆ ಕಚೇರಿಯಲ್ಲಿ ಹೆಸರನ್ನು ನೊಂದಾಯಿಸುವುದು.​ರಂಗಪೂಜೆ ಸೇವೆ: ನವರಾತ್ರಿಯ ದಿನ ವಿಶೇಷ ರಂಗಪೂಜೆ (1,500 ರೂ.) ಅಥವಾ ಸಾರ್ವಜನಿಕ ರಂಗಪೂಜೆ (1,000 ರೂ.) ಮಾಡಿಸುವವರು ಮುಂಚಿತವಾಗಿ ಕ್ಷೇತ್ರದ ಕಚೇರಿಯಲ್ಲಿ ತಿಳಿಸುವುದು.​

ಸಪ್ತಶತಿ ಪಾರಾಯಣ: ನವರಾತ್ರಿ ದಿನಗಳಲ್ಲಿ ದೇವಿಗೆ ಸಪ್ತಶತಿ ಪಾರಾಯಣ (500 ರೂ.) ಸೇವೆ ಮಾಡಿಸುವವರು ಕಚೇರಿಯಲ್ಲಿ ರಶೀದಿ ಪಡೆಯಬಹುದು.​ಹಸಿರುವಾಣಿ ಸ್ವೀಕಾರ: ಕ್ಷೇತ್ರಕ್ಕೆ ಹಸಿರುವಾಣಿಯನ್ನು (ತೆಂಗಿನಕಾಯಿ, ಹೋಮದ ಸಾಮಾನುಗಳು, ಕುಂಬಳಕಾಯಿ, ಬಾಳೆಎಲೆ, ತರಕಾರಿ, ವೀಳ್ಯದೆಲೆ, ಅಡಿಕೆ ಇತ್ಯಾದಿ) ಕಾಣಿಕೆಯಾಗಿ ಸ್ವೀಕರಿಸಲಾಗುವುದು.

LEAVE A REPLY

Please enter your comment!
Please enter your name here