







ಬೆಳ್ತಂಗಡಿ : ತಾಲೂಕಿನ ನೆರಿಯ,ಚಾರ್ಮಾಡಿ,ಮುಂಡಾಜೆ, ಉಜಿರೆ, ಕೊಕ್ಕಡ, ಧರ್ಮಸ್ಥಳ, ನಾರಾವಿ, ವೇಣೂರು, ಕೊಯ್ಯೂರು, ಬೆಳಾಲು, ಬಂದಾರು, ಬಂಗಾಡಿ, ಇಂದಬೆಟ್ಟು, ನಡ, ಪದ್ಮುಂಜ, ಕಳಿಯ, ಅಳದಂಗಡಿ ಭಾಗಗಳಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ಮೋಹನ್ ಗೌಡ ಕಲ್ಮಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


2027ನೇ ಸಾಲಿನ ಕೃಷಿ ಪ್ರಶಸ್ತಿಗಾಗಿ ಬೆಳ್ತಂಗಡಿ ತಾಲೂಕಿನಲ್ಲಿಯೇ ಬೃಹತ್ ಕೃಷಿಮೇಳ ಕೃಷಿ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 50ಕ್ಕೂ ಹೆಚ್ಚು ಕೃಷಿಕರಿಗೆ ಜಿಲ್ಲಾಮಟ್ಟದ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2027ನೇ ಸಾಲಿನಲ್ಲಿ ಈ ಮೇಲಿನ ವಲಯಗಳ ವ್ಯಾಪ್ತಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಕೃಷಿಕರನ್ನು ಗುರುತಿಸಿ ಬೆಳ್ತಂಗಡಿ ತಾಲೂಕು ಮಟ್ಟದ ಕೃಷಿಕ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದ್ದು ಇದಕ್ಕಾಗಿ ನೋಡಲ್ ಅಧಿಕಾರಿಗಳು ಹುದ್ದೆಗೆ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಮುಖ್ಯ ಸಂಯೋಜಕರು, ಸಿಇಒ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ.
SSLC, PUC ಉತ್ತೀರ್ಣರಾದ 26 ರಿಂದ 42ರವರೆಗಿನ ವಿವಾಹಿತ ಮಹಿಳೆಯರು ಹಾಗೂ ಯುವಕರಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ರೂ. 30,000 ದಿಂದ ರೂ. 35,000 ವರೆಗೆ ವೇತನ ನೀಡಲಾಗುವುದು ಎಂದವರು ತಿಳಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ಅ.5ರಂದು ಬಿಸಿ ರೋಡ್ ನಲ್ಲಿರುವ ಯೋಜನಾ ಕಚೇರಿ, ಯೂನಿಯನ್ ಬ್ಯಾಂಕ್ ನ ಎರಡನೇ ಮಹಡಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನಕ್ಕೆ ಭಾಗವಹಿಸಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ ಯೋಜನಾ ಕಚೇರಿ ವಾಟ್ಸಪ್ ಸಂಖ್ಯೆ 7022560060 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.









