






ಬೆಳ್ತಂಗಡಿ: ಕಸಬಾ ಗ್ರಾಮದ ಬೆದ್ರಬೆಟ್ಟು ಶ್ರೀ ಮಹಮ್ಮಾಯಿ ಮಾರಿಗುಡಿಯಲ್ಲಿ ೨೦೨೫ರ ಫೆಬ್ರವರಿ ೮ರಂದು ನಡೆದಿದ್ದ ಹಿಂದೂ ಸಮಾಜ ರಕ್ಷಣಾ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಸೆ. ೨೯ರಂದು ಬೆಳಿಗ್ಗೆ ಬೆಳ್ತಂಗಡಿ ನ್ಯಾಯಾಲಯ ವಾರಂಟ್ ಜಾರಿ ಮಾಡಿದ ಮತ್ತು ಮಧ್ಯಾಹ್ನ ಮಹೇಶ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ಹಾಜರಾಗಿ ವಾರಂಟ್ ರೀ ಕಾಲ್ ಮಾಡಿಸಿದ ಘಟನೆ ನಡೆದಿದೆ.


ಘಟನೆಯ ವಿವರ: ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾರಿಗುಡಿಯ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಉಜಿರೆ ಶಿವಾಜಿನಗರದ ಸಾಯಂಕ್ ನಿಲಯದ ಕಿಶೋರ್ ಕುಮಾರ್(೫೨) ಎಂಬವರು ಕೇಸು ದಾಖಲಿಸಿದ್ದರು. ೦೮-೦೨-೨೦೨೫ರಂದು ಬೆದ್ರಬೆಟ್ಟು ಶ್ರೀ ಮಹಾಮ್ಮಾಯಿ ಮಾರಿಗುಡಿಯಲ್ಲಿ ನಡೆದ ಹಿಂದೂ ಸಮಾಜ ರಕ್ಷಣಾ ಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ಅವರು ವೇದಿಕೆಯ ಮೇಲೆ ನಿಂತು ಒಬ್ಬ ಅಧರ್ಮಿಯಿಂದ ಧರ್ಮ ನಾಶ ಆಗುತ್ತದೆ. ಇಂದು ಧಾರ್ಮಿಕ ಸ್ಥಳಗಳಿಗೆ ಮತ್ತು ಹಿಂದೂ ಸಮಾಜಕ್ಕೆ ಅಧರ್ಮಿಗಳ ಪ್ರಭಾವ ಹೆಚ್ಚಾಗಿದೆ. ನಾವು ನಮ್ಮ ಸಂಪ್ರದಾಯ ಮತ್ತು ಧರ್ಮವನ್ನು ಉಳಿಸಿಕೊಳ್ಳಬೇಕಾದ ಸಮಯ ಬಂದಿದೆ. ದುಡ್ಡಿಗಾಗಿ ಧರ್ಮ ಅಲ್ಲ. ಸನಾತನ ಹಿಂದೂ ಧರ್ಮ ಉಳಿಸಲು ನಾವು ಈ ಕಾರ್ಯ ಮಾಡುತ್ತಿzವೆ. ಆದರೆ ಇವತ್ತು ಅಧರ್ಮಿಯರ ದುಡ್ಡು ತಂದು ಧರ್ಮಸ್ಥಳ ಮಾತ್ರ ಅಲ್ಲ. ಉಡುಪಿ ಬೇರೆ ದೇವಾಲಯಗಳಲ್ಲೂ ಇರಿಸಿಕೊಳ್ಳುತ್ತಿದ್ದಾರೆ ಎಂದು ಮಾತನಾಡಿ ಧರ್ಮಸ್ಥಳ ಮತ್ತು ಇತರ ದೇವಾಲಯಗಳ ಬಗ್ಗೆ ಜನರಲ್ಲಿ ಅನುಮಾನ ಮತ್ತು ವಿಚಲಿತ ಭಾವನೆ ಮೂಡಿಸುವ, ದೇವಾಲಯಗಳ ಬಗ್ಗೆ ಜನರಲ್ಲಿ ಸಂಶಯ ಎಬ್ಬಿಸುವ ಮತ್ತು ಸಾಮಾಜಿಕ ಶಾಂತಿ ಹಾಳು ಮಾಡುವ ಉzಶದಿಂದ ಸಾರ್ವಜನಿಕವಾಗಿ ಅಸಭ್ಯವಾಗಿ ಮಾತನಾಡಿದಾಗ ನಾನು ಧಾರ್ಮಿಕ ಆಘಾತಕ್ಕೆ ಒಳಗಾಗಿzನೆ ಮತ್ತು ಜನರ ಧಾರ್ಮಿಕ ಭಾವನೆಗಳಿಗೆ ನೇರ ದಾಳಿ ಮಾಡಿ ಜನ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವಂತೆ ಸಾಮಾಜಿಕ ಶಾಂತಿ ಭಂಗಕ್ಕೆ ಮತ್ತು ಸಮುದಾಯಗಳ ನಡುವಿನ ಧಾರ್ಮಿಕ ಭಾವನೆಗಳನ್ನು ಉzಶಪೂರ್ವಕವಾಗಿ ನೋಯಿಸುವ, ಧಾರ್ಮಿಕ ಸ್ಥಳಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ, ಬೇರೆ ಧರ್ಮದ ಜನರಿಗೆ ಹಿಂದೂ ಧರ್ಮದ ಶಂಕೆ ಹುಟ್ಟು ಹಾಕುವ, ಸನಾತನ ಹಿಂದೂ ಧರ್ಮದ ಗೌರವವನ್ನು ಕುಗ್ಗಿಸುವ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೧೪/೨೦೨೫ರಂತೆ ೩೫೩(೨) ಸೆಕ್ಷನ್ ಅಡಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಯವರು ಮಹೇಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ೨೦೨೫ರ ಡಿ.೨೪ರಂದು ಬೆಳ್ತಂಗಡಿ ನ್ಯಾಯಾಲಯ ಬಂಧನದ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ೨೦೨೬ರ ಫೆ.೨ರಂದು ಮಹೇಶ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮಹೇಶ್ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದರು. ಆ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯ ಸೆ.೨೯ರಂದು ಬೆಳಿಗ್ಗೆ ವಾರಂಟ್ ಹೊರಡಿಸಿತ್ತು. ಮಧ್ಯಾಹ್ನ ಮಹೇಶ್ ಶೆಟ್ಟಿ ತಿಮರೋಡಿ ಅವರು ತಮ್ಮ ಪರ ವಕೀಲ ಸಿರಾಜುದ್ದೀನ್ ಜೋಗಿಬೆಟ್ಟು ಅವರೊಂದಿಗೆ ನ್ಯಾಯಾಧೀಶ ರಾಮಲಿಂಗಪ್ಪ ಅವರ ಎದುರು ಹಾಜರಾಗಿದ್ದಾರೆ. ಈ ವೇಳೆ ವಾರಂಟ್ ರೀ ಕಾಲ್ ಮಾಡಲಾಗಿದ್ದು ವಿಚಾರಣೆ ಮುಂದೂಡಲಾಗಿದೆ.









