ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಇಂದಬೆಟ್ಟು ಕೋಶಾಧಿಕಾರಿಯಾಗಿ ಮಾತುಕುಟ್ಟಿ ಧರ್ಮಸ್ಥಳ ಆಯ್ಕೆ

0

ಬೆಳ್ತಂಗಡಿ : ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಬೆಳ್ತಂಗಡಿ ತಾಲೂಕು ಸಂಘದ ಅಧ್ಯಕ್ಷ ಇಂದಬೆಟ್ಟು ಶ್ರೀ ದುರ್ಗಾ ಸೌಂಡ್ಸ್ ಮಾಲಕ ಚಂದ್ರಶೇಖರ ಇಂದಬೆಟ್ಟು ಇವರು ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘದ 2026-2028ನೇ ಸಾಲಿನ ಉಪಾಧ್ಯಕ್ಷರಾಗಿ ಹಾಗೂ ಬೆಳ್ತಂಗಡಿ ತಾಲೂಕು ಸಂಘದ ಮಾಜಿ ಕೋಶಾಧಿಕಾರಿ ಧರ್ಮಸ್ಥಳ ಒಡಂಪಲ್ಲಿ ಅರೆಂಜರ್ಸ್ ಮಾಲಕ ಮಾತುಕುಟ್ಟಿ ಧರ್ಮಸ್ಥಳ ಇವರು ಜಿಲ್ಲಾ ಸಂಘದ ಕೋಶಾಧಿಕಾರಿಯಾಗಿ, ಜೊತೆಕಾರ್ಯದರ್ಶಿಯಾಗಿ ಅಖಿಲ್ ಮೋಹನ್, ಗೌರವ ಸಲಹೆಗಾರರಾಗಿ ಜೋಸೆಫ್ ಕೆ.ಡಿ., ಸಂಗಟನಾ ಕಾರ್ಯದರ್ಶಿಯಾಗಿ ಸಂಜೀವ ಬಿ.ಎಚ್., ನಾರಾಯಣ ಗೌಡ, ಕಿರಣ್, ವಸಂತ್ ಕೆ. ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here