ದೇವರಗುಡ್ಡೆ ಹಾಲು ಉತ್ಪಾದಕರ ಸಂಘದ ಹೆಸರಲ್ಲಿ ನಕಲಿ ಸಹಿ, ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ – ಧರ್ಮಸ್ಥಳ ಠಾಣೆಗೆ ದೂರು

0

ಕಲ್ಮಂಜ:ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಹೆಸರು ಬಳಸಿ ನಕಲಿ ಸಹಿ ಇರುವ ಮನವಿ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಧರ್ಮಸ್ಥಳ ಠಾಣೆ, ಸಹಕಾರ ಇಲಾಖೆ ಮತ್ತು ದ.ಕ. ಹಾಲು ಒಕ್ಕೂಟಕ್ಕೆ ಸಚಿನ್ ಇವರು ದೂರು ನೀಡಿದ್ದಾರೆ.

ಸಂಘದ ಸದಸ್ಯರಲ್ಲದಿದ್ದರೂ ತಾನು ಸಂಘದ ಪ್ರಮುಖ ಸದಸ್ಯನೆಂದು ಹೇಳಿಕೊಂಡು ರಾಜ್ ಕಿಶನ್ ಪಿಂಟೊ, ಅಕ್ಷಯ ನಗರ, ನಿಡಿಗಲ್, ಕಲ್ಮಂಜ ಇವರು ದರ್ಶನ್ ಕೆ.ಪಿ, ತಂದೆ ಪ್ರಭಾಕರ ಕೆ., ಶಿವಂಕರಿ ನಿಲಯ, ಬೀಜದಪಾಡಿ, ಕಲ್ಮಂಜ ರವರೊಂದಿಗೆ ಸೇರಿಕೊಂಡು ಸಂಘದ ಹೆಸರು ಬಳಸಿ ಸಂಘ ಹಾಗೂ ಸದಸ್ಯರ ವಿರುದ್ಧ ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ.ಅಲ್ಲದೆ, ಕೆಲವು ನಕಲಿ ಸಹಿಗಳನ್ನು ಒಳಗೊಂಡ ಮನವಿಯನ್ನು ಸಿದ್ಧಪಡಿಸಿ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿರುವುದು ಗಮನಕ್ಕೆ ಬಂದಿದೆ. ಇದೇ ರೀತಿ ಇವರ ಜೊತೆ ದಿನೇಶ್, ಪಂಚಶ್ರೀ ನಿಲಯ, ಕಲ್ಮಂಜ ರವರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಂಘದ ಕುರಿತು ಸುಳ್ಳು ಮತ್ತು ಆಧಾರರಹಿತ ಮಾಹಿತಿಯ ಪೋಸ್ಟ್‌ಗಳನ್ನು ಪ್ರಸಾರ ಮಾಡಿ ಮಾನಹಾನಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕೃತ್ಯಗಳಿಂದ ಸಂಘದ ಗೌರವಕ್ಕೆ ಧಕ್ಕೆ ಉಂಟಾಗಿದ್ದು, ಸದಸ್ಯರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಸುಳ್ಳು ಮತ್ತು ಆಧಾರರಹಿತ ಪೋಸ್ಟ್ ಮಾಡಿ ಮಾನಹಾನಿ ಮಾಡಿರುವ ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿ ಸಚಿನ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.ಜೊತೆಗೆ ಸಂಘದ ಕಚೇರಿಗೆ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಸಹಕಾರ ಇಲಾಖೆ, ದ.ಕ. ಹಾಲು ಒಕ್ಕೂಟ ಸೇರಿದಂತೆ ಸಂಘದ ವಿಶೇಷಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here