






ಧರ್ಮಸ್ಥಳ: ಹೊಟೇಲ್ ಆನಂದ ಭವನದ ಮಾಲಕಿ ವಸಂತಿ(84ವ) ಸೆ.29 ರಂದು ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ವಸಂತಿಯವರು ತಮ್ಮ ಸ್ವಗೃಹ ಕೂಟದಕಲ್ಲಿನ ಗಣೇಶ್ ನಿಲಯದಲ್ಲಿ ಕೊನೆಯುಸಿರೆಳೆದರು.


ಮೃತರು ಧರ್ಮಸ್ಥಳ ಗ್ರಾ.ಪಂ.ಮಾಜಿ ಸದಸ್ಯ ರವಿಕುಮಾರ್, ಮಗಳು ಜಯಲಕ್ಷ್ಮಿಯವರನ್ನು ಅಗಲಿದ್ದಾರೆ. ವಸಂತಿಯವರ ಅಂತ್ಯಕ್ರಿಯೆ ಕೂಟದಕಲ್ಲಿನಲ್ಲಿ ಇಂದು ಸಂಜೆ 5ಗಂಟೆಯ ನಂತರ ನೆರವೇರಲಿದೆ.









