ಕಲ್ಮಂಜ ದೇವರಗುಡ್ಡೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಬದಲಾವಣೆಗೆ ಸದಸ್ಯರ ಆಗ್ರಹ: ವಿಸ್ತರಣಾಧಿಕಾರಿಗೆ ಮನವಿ

0

ಬೆಳ್ತಂಗಡಿ: ತಾಲೂಕಿನ ಕಲ್ಮಂಜ ಗ್ರಾಮದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಸಚಿನ್‌ ಅವರನ್ನು ತಕ್ಷಣವೇ ಹುದ್ದೆಯಿಂದ ಬದಲಾಯಿಸಬೇಕು ಎಂದು ಆಗ್ರಹಿಸಿ ಸಂಘದ ಸದಸ್ಯರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 25ರಂದು ಕಲ್ಮಂಜ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆದಿದ್ದು, ಕಾರ್ಯದರ್ಶಿಯವರ ನಡವಳಿಕೆಯಿಂದಾಗಿ ಹಾಲು ಉತ್ಪಾದಕರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ, ಸಭೆಯಲ್ಲೇ ಸದಸ್ಯರಿಂದ ಸಹಿ ಸಂಗ್ರಹ ನಡೆಸಿ, ಒಕ್ಕೂಟದ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಪ್ರಮುಖ ಸದಸ್ಯರಾದ ರಾಜ್ ಕಿಸಾನ್ ಪಿಂಟೋ, ದರ್ಶನ್ ಕೆಪಿ ಸೇರಿದಂತೆ ಇತರ ಹಾಲು ಉತ್ಪಾದಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here