ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಯಕ್ಷಕಲಾ ವಿದ್ವನ್ಮಣಿ ಪ್ರಶಸ್ತಿ ಪ್ರದಾನ

0

ಬೆಳ್ತಂಗಡಿ:ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಸುವರ್ಣ ಮಹೋತ್ಸವದ ಪ್ರಯುಕ್ತ ನಿವೃತ್ತ ಶಿಕ್ಷಕ, ಹಿರಿಯ ಅರ್ಥಧಾರಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಪಡಂಗಡಿಯ ಶ್ರೀನಿಲಯದಲ್ಲಿ ಯಕ್ಷಕಲಾ ವಿದ್ವನ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

90ರ ಹುಟ್ಟುಹಬ್ಬ ಆಚರಿಸುತ್ತಿರುವ ಪೂರ್ವಭಾವಿಯಾಗಿ ಈ ಗೌರವವು ನನಗೆ ಸಂತಸವನ್ನು ನೀಡಿದೆ. ಶಿಕ್ಷಕ ತರಬೇತಿಯ ಸಂದರ್ಭ ತಾಳಮದ್ದಳೆಯಲ್ಲಿ ಆಕಸ್ಮಿಕವಾಗಿ ಅರ್ಥಧಾರಿಯಾದ ನಾನು ಅದನ್ನು ಬಿಡಬೇಕೆಂದರೂ ಅದು ನನ್ನನ್ನು ಉಳಿಸಿ ಬೆಳೆಸಿತು. ಸಾಮಗದ್ವಯರು, ಶೇಣಿ, ಗುರು ಪೆರ್ಲ ಕೃಷ್ಣ ಭಟ್ ಮತ್ತು ಕಲಾಭಿಮಾನಿಗಳು ನನ್ನನ್ನು ಮೆಚ್ಚಿಕೊಂಡರೆಂದು ತಿಳಿಸಿದರು. ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ಕನ್ನಡ ಸಾರಸ್ವತ ಲೋಕ ಮತ್ತು ಯಕ್ಷಗಾನ ವಲಯಕ್ಕೆ ಮಹಾಭಾರತ ಕೋಶ, ರಾಮಾಯಣ ಕೋಶ, ಭಾಗವತ ಕೋಶ, ದಶಾವತಾರ ಉಪನ್ಯಾಸಗಳು,ಅರ್ಥ ಸಹಿತ ಕುಮಾರ ವಿಜಯ ಮೊದಲಾದ ಅಮೂಲ್ಯ ಕೃತಿಗಳನ್ನು ನೀಡಿದ ಶಾಸ್ತ್ರಿಗಳು ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಹೊಸ ದಾರಿಯನ್ನು ನಿರ್ಮಿಸಿದವರೆಂದು ತಿಳಿಸಿದರು.

ಶ್ರೀಧರ ಎಸ್ ಪಿ ಕೃಷ್ಣಾಪುರ ಸನ್ಮಾನ ಪತ್ರ ವಾಚಿಸಿದರು.ಕಾರ್ಯದರ್ಶಿ ಶ್ರೀಪತಿ ಭಟ್ ಕೆ ಬಿ, ಸುರೇಶ ಪುತ್ತೂರಾಯ , ಟಿ. ಕೇಶವ ಭಟ್ ಉಪಸ್ಥಿತರಿದ್ದರು. ಕಲಾವಿದ ಅಂಬಾ ಪ್ರಸಾದ ಪಾತಾಳ ಸ್ವಾಗತಿಸಿ ಪ್ರದೀಪ ಹೆಬ್ಬಾರ್ ಚಾರ ವಂದಿಸಿದರು.

LEAVE A REPLY

Please enter your comment!
Please enter your name here