






ಶಿಶಿಲ: ತಲಾ ಸುಮಾರು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೆರಿಯ ಹಾಗೂ ಶಿಶಿಲ ವಾಲ್ಮೀಕಿ ಆಶ್ರಮ ಶಾಲೆಗಳು ಸೆ.29ರಂದು ಉದ್ಘಾಟನೆಗೊಳ್ಳಲಿವೆ.
ತಾಲೂಕಿಗೆ ಮಾದರಿಯಾಗುವ ರೀತಿಯಲ್ಲಿ ನಿರ್ಮಾಣಗೊಂಡಿರುವ ಈ ಶಾಲಾ ಕಟ್ಟಡಗಳು ಉದ್ಘಾಟನೆಗೆ ಸಜ್ಜಾಗಿದ್ದರೂ, ಶಿಶಿಲ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೆಲವು ಮೂಲಸೌಕರ್ಯಗಳ ಕೊರತೆ ಇನ್ನೂ ಮುಂದುವರಿದಿದೆ.ಶಿಶಿಲ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ವಿವಿಧ ವಯೋಮಾನದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ನೂತನ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗಿದ್ದರೂ, ವಿದ್ಯುತ್ ಹಾಗೂ ಬಿಸಿನೀರಿನಂತಹ ಅಗತ್ಯ ಸೌಲಭ್ಯಗಳ ಸಮರ್ಪಕ ವ್ಯವಸ್ಥೆ ಇನ್ನೂ ಆಗದಿರುವುದು ವಿದ್ಯಾರ್ಥಿಗಳಲ್ಲಿ ಸಮಸ್ಯೆಗೆ ಕಾರಣವಾಗಿದೆ.


ವಿದ್ಯುತ್ ಕೈಕೊಟ್ಟರೆ ಕತ್ತಲೆಯಲ್ಲೇ ಮಕ್ಕಳುಹಳೆಯ ಶಾಲಾ ಕಟ್ಟಡದಲ್ಲಿದ್ದ 5 ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ್ ಇನ್ವರ್ಟರ್ ವ್ಯವಸ್ಥೆಯನ್ನು ನೂತನ ಕಟ್ಟಡಕ್ಕೆ ಇನ್ನೂ ಸ್ಥಳಾಂತರಿಸಲಾಗಿಲ್ಲ. ಹೀಗಾಗಿ ವಿದ್ಯುತ್ ವ್ಯತ್ಯಯ ಉಂಟಾದಾಗ ಮಕ್ಕಳು ಅರೆಬೆಳಕಿನಲ್ಲಿಯೇ ಪಾಠಾಭ್ಯಾಸ ಹಾಗೂ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಪುಟ್ಟ ಮಕ್ಕಳಿಗೆ ಹಂಡೆಯಲ್ಲಿ ಬಿಸಿನೀರುಶಾಲೆಯಲ್ಲಿನ ಸೋಲಾರ್ ಬಿಸಿನೀರಿನ ವ್ಯವಸ್ಥೆಯೂ ಇನ್ನೂ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎನ್ನಲಾಗಿದೆ. ಪರಿಣಾಮವಾಗಿ ಪುಟ್ಟ ಮಕ್ಕಳಿಗೆ ಸ್ನಾನ ಮಾಡಿಸಲು ಹಂಡೆಯಲ್ಲಿ ನೀರು ಕಾಯಿಸಿ ಬಳಸಬೇಕಾದ ಪರಿಸ್ಥಿತಿ ಇದೆ.
ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಬೇಕೆಂಬ ಆಗ್ರಹ ಕೇಳಿಬಂದಿದೆ. ಸೆ.29ರ ಉದ್ಘಾಟನೆಗೂ ಮುನ್ನ ಸೋಲಾರ್ ಇನ್ವರ್ಟರ್ ಹಾಗೂ ಬಿಸಿನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂಬುದು ಪೋಷಕರು ಹಾಗೂ ಗ್ರಾಮಸ್ಥರ ಆಶಯವಾಗಿದೆ.









