ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ: ನೂತನ ಎಸ್‌ಐಟಿ ರಚನೆ ಹಾಗೂ ವಿವಾದಿತ ಅಧಿಕಾರಿಗಳ ನೇಮಕಕ್ಕೆ ತೀವ್ರ ವಿರೋಧ

0

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ , ಕೊಲೆ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ವಿಶೇಷ ತನಿಖಾ ದಳ (ಎಸ್ಐಟಿ) ಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಹಲವಾರು ಆರೋಪಗಳನ್ನು ಹೊತ್ತಿರುವ ಪೋಲಿಸ್ ಅಧಿಕಾರಿಗಳಾದ ಶಶಿಕುಮಾರ್ ಹಾಗೂ ತನಿಖಾ ದಳದ ಸದಸ್ಯರಾದ ವೆಂಕಟೇಶ್ ಪ್ರಸನ್ನ ಅವರನ್ನು ತಂಡದಿಂದ ಕೈಬಿಡಬೇಕು.

14 ವರ್ಷಗಳ ಹಿಂದೆ ನಡೆದ ಘಟನೆ ಬಗ್ಗೆ ನಡೆದ ಈ ಹಿಂದಿನ ಸಿಐಡಿ , ಸಿಬಿಐ , ಎಸ್ಐಟಿ ನ ಅಸಮರ್ಪಕ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೊಸ ತನಿಖಾ ತಂಡದಿಂದ ತನಿಖೆ ನಡೆಸಲು ಆದೇಶ ನೀಡಲಾಗಿತ್ತು. ಆದರೆ ಇಂತಹ ಮಹತ್ವದ ತನಿಖೆಯ ಬಗ್ಗೆ ರಚಿಸಿದ ತನಿಖಾ ತಂಡಕ್ಕೆ ಭೃಷ್ಟಾಚಾರ , ಕರ್ತವ್ಯಲೋಪ ಸೇರಿದಂತೆ ಹಲವಾರು ಆರೋಪಗಳಿಗೆ ತನಿಖೆಯನ್ನು ಎದುರಿಸಿರುವ ಪೋಲಿಸ್ ಅಧಿಕಾರಿಗಳನ್ನು ನೇಮಕ ಮಾಡಿರುವುದು ಸರಿಯಲ್ಲ.

ಈ ಇಬ್ಬರ ಪೈಕಿ ಶಶಿಕುಮಾರ್ ಮೇಲೆ ಭೃಷ್ಟಾಚಾರ , ಕರ್ತವ್ಯಲೋಪ , ಕಾನೂನು ಸುವ್ಯವಸ್ಥೆ ವಿಫಲತೆಯ ಆರೋಪಗಳಿದ್ದು , ವೆಂಕಟೇಶ್ ಪ್ರಸನ್ನ ಮೇಲೆ ಭೃಷ್ಟಾಚಾರ , ಭೂಗತ ಪಾತಕಿಗಳ ಜೊತೆಗೆ ನಂಟು ಸೇರಿದಂತೆ ಯುವ ನ್ಯಾಯವಾದಿ ನೌಶಾದ್ ಕಾಸಿಂಜಿ ಕೊಲೆ ಪ್ರಕರದ ಆರೋಪವಿದೆ. ಇಂತಹ ಅಧಿಕಾರಿಗಳಿಂದ ವಸ್ತುನಿಷ್ಠ , ಗುಣಮಟ್ಟದ ತನಿಖೆಯನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ.

14 ವರ್ಷಗಳ ನ್ಯಾಯದ ಹೋರಾಟಕ್ಕೆ ನ್ಯಾಯ ಸಿಗುವಂತಾಗಲು ತಕ್ಷಣ ಈ ಇಬ್ಬರೂ ಅಧಿಕಾರಿಗಳನ್ನು ಕೈಬಿಟ್ಟು ರಾಜ್ಯದ ಅತ್ಯಂತ ದಕ್ಷ , ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ.ಶೇಖರ್ ಲಾಯಿಲಸಾಮಾಜಿಕ ಹೋರಾಟಗಾರ

LEAVE A REPLY

Please enter your comment!
Please enter your name here