






ನೇತ್ರಾವತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಮುಂಡಾಜೆ ಇದರ ಮಹಾಸಭೆಯನ್ನು ಸೆ.23ರಂದು ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಭವಾನಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯನ್ನು ಸಂಜೀವಿನಿ ದ್ಯೇಯ ಗೀತೆಯೊಂದಿಗೆ ಪ್ರಾರಂಭಿಸಲಾಯಿತು ಒಕ್ಕೂಟದ ಪದಾಧಿಕಾರಿಯಾದ ಭವ್ಯ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಎಲ್ ಸಿ ಆರ್ ಪಿ ಪುಷ್ಪಾವತಿ ಎಲ್ಲರನ್ನು ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಶಶಿಕಲ 2025 -26 ನೇ ಸಾಲಿನ ವರದಿಯನ್ನು ಮಂಡಿಸಿದರು.
ಜಮ ಖರ್ಚಿನ ವರದಿಯನ್ನು ಎಂಬಿಕೆ ಮೀನಾ ಇವರು ಓದಿದರು.ಸಂಜೀವಿನಿ ಚಪ್ಪಾಳೆ ಮೂಲಕ ವರದಿಯನ್ನು ಅನುಮೋದಿಸಲಾಯಿತು.ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಮೇಡಂ ಪ್ರಾಸ್ತಾವಿಕವಾಗಿ ಸಂಜೀವಿನಿ ಯೋಜನೆಯಿಂದ ಸದಸ್ಯರಿಗೆ ಸಿಗುವ ಸಾಲ ಸೌಲಭ್ಯಗಳು ಸಂಜೀವಿನಿ ಯೋಜನೆಯ ಪ್ರಮುಖ ಉದ್ದೇಶದ ಬಗ್ಗೆ ಹಾಗೂ ಮಹಿಳೆಯರ ಸಬಲೀಕರಣದ ಬಗ್ಗೆ ತರಬೇತಿಗಳ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.


ಮುಂಡಾಜಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯದ ಗಾಯತ್ರಿ ಮೇಡಂ ಸಂಜೀವಿನಿ ಮಹಿಳೆಯರ ಬಗ್ಗೆ ಶುಭನುಡಿಗಳ ನಾಡಿದರು ವಲಯ ಮೇಲ್ವಿಚಾರಕರಾದ ಜಯಾನಂದ ಸರ್ ಇವರು NRLM ಯೋಜನೆಯ ಬಗ್ಗಮಾಹಿತಿ ನೀಡಿದ್ದರು ನಾಟಿ ವೈದ್ಯಯಾದ ಕುಸುಮಾವತಿ ಹಾಗೂ CIF ಸಾಲ ಪಡೆದು ಹೈನುಗಾರಿಕೆ ನಡೆಸುತ್ತಿರುವ ಕಮಲ ರವರನ್ನು ಸ್ವಚ್ಛ ಘಟಕದ ಸಿಬ್ಬಂದಿಯಾದ ವಿನೋದ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು ನಂತರ ಬೆಸ್ಟ್ ಸಂಘವನ್ನು ಗುರುತಿಸಿ ಅವರಿಗೆ ಸ್ಮರಣೆಗೆ ನೀಡಲಾಯಿತು.
ಸಂಘದ ಸದಸ್ಯರಲ್ಲಿ ಒಬ್ಬರನ್ನು ಲಕ್ಕಿ ಮಹಿಳೆಯಾಗಿ ಗುರುತಿಸಿ ಅವರಿಗೆ ಬಹುಮಾನವನ್ನು ನೀಡಲಾಯಿತು ಸಂಜೀವಿನಿ ಸದಸ್ಯರಿಗೆ ರಸಪ್ರಶ್ನೆಯನ್ನು ಕೇಳಲಾಯಿತು ಹಾಗೂ ಹೂಗುಚ್ಛ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗಿತ್ತು ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.
ಒಕ್ಕೂಟದ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು ಸಂಜೀವಿನಿ ಸಂಘದ ಸದಸ್ಯರಾದ ಜೇಸಿ ಅವರು ಮಾಡಿದ ಅಣಬೆ ಉಪಿನಕಾಯಿ ಹಾಗೂ ಅಣಬೆಯ ಚಟ್ನಿ ಪುದಿಯನ್ನು ಬಿಡುಗಡೆ ಮಾಡಲಾಯಿತು.
ಒಕ್ಕೂಟದ ಅಧ್ಯಕ್ಷರಾದ ಭವಾನಿ ಶೆಟ್ಟಿ ಅವರು ಸಂಜೀವಿನಿ ಒಕ್ಕೂಟದ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡಿದರು ಎಲ್ ಸಿ ಆರ್ ಪಿ ಅವರದ ಶಾಲಿನಿ ಯವರು ಧನ್ಯವಾದಗಳು ನೀಡಿದರು ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು









