






ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಅರೋಗ್ಯ ಮತ್ತು ಆಹಾರಪದ್ಧತಿ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಯೋಗ ವಿಜ್ಞಾನ ಹಾಗೂ ಪ್ರಕೃತಿ ಚಿಕಿತ್ಸೆ ಕಾಲೇಜು ಹಾಗೂ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಇಲ್ಲಿನ ಹಿರಿಯ ವೈದ್ಯಧಿಕಾರಿಗಳು ಹಾಗೂ ಆರ್ ಎಮ್ ಓ ಆಗಿರುವ ಡಾ. ಬಿಂದು ಶ್ರೀಧರ್ , ಡಯಟ್ ಹಾಗೂ nutrtion ವಿಭಾಗದ ವೈದ್ಯರಾದ ಡಾ. ಭಾಷಿಣಿ ಹಾಗೂ ಡಾ. ಪ್ರಿಯದರ್ಶಿನಿ ಮಾಹಿತಿ ನೀಡಿದರು.



ಬೆಳ್ತಂಗಡಿ ತಾಲೂಕು ಪಂಚಾಯತ್ ವ್ಯಾಪ್ತಿಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಎನ್ ಭವಾನಿಶಂಕರ್, ಪ್ರಭಾರ ಸಹಾಯಕ ನಿರ್ದೇಶಕ (ಪಂ. ರಾ) ಶ್ರೀ ಗಣೇಶ್ ಶೆಟ್ಟಿ. ಪ್ರಭಾರ ಸಹಾಯಕ ನಿರ್ದೇಶಕ (ಗ್ರಾ ಉ ) ಗಾಯತ್ರಿ ಪಿ, ವ್ಯವಸ್ಥಾಪಕಿ ನಿಶಾ, ಲೆಕ್ಕಧಿಕಾರಿ ಅಶೋಕ್ ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.









