ಸೆ.30: ತಾಲೂಕು ಪಂಚಾಯತ್ ಪ್ರಭಾರ ಸಹಾಯಕ ಲೆಕ್ಕಾಧಿಕಾರಿ ಅಶೋಕ್ ದೇವಾಡಿಗ ನಿವೃತ್ತಿ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಪ್ರಭಾರ ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ್ ದೇವಾಡಿಗ ಅವರು ಸೆ.೩೦ರಂದು ನಿವೃತ್ತಿ ಹೊಂದಲಿದ್ದಾರೆ.
1988ರಲ್ಲಿ ವೇಣೂರು ಮಂಡಲ ಪಂಚಾಯಿತಿಯಲ್ಲಿ ಗುಮಾಸ್ತರಾಗಿ ಸೇರ್ಪಡೆಗೊಂಡು ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು ಅಲ್ಲಿಯೇ 10 ವರ್ಷಗಳ ಕಾಲ ಸೇವೆ ಸಲ್ಲಿಸಿ, 1998ರಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಕಳಿಯ ಗ್ರಾಮ ಪಂಚಾಯತ್‌ಗೆ ಭಡ್ತಿಯಾಗಿ ವರ್ಗಾವಣೆಗೊಂಡು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವಧಿಯಲ್ಲಿ 3 ವರ್ಷಗಳ ಕಾಲ ಬಳಂಜ ಗ್ರಾಮ ಪಂಚಾಯತ್‌ನಲ್ಲಿಯೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, 2013ರಲ್ಲಿ ಮುಂಬಡ್ತಿಗೊಂಡು ಅಳದಂಗಡಿ ಗ್ರಾಮ ಪಂಚಾಯತ್‌ಗೆ ಗ್ರೇಡ್-1 ಕಾರ್ಯದರ್ಶಿಯಾಗಿ ಮುಂಭಡ್ತಿಗೊಂಡು ನಿಯೋಜಿಸಲ್ಪಟ್ಟಿರುತ್ತಾರೆ. ತದನಂತರ ತಾಲೂಕು ಪಂಚಾಯತ್‌ನಲ್ಲಿ ವಿಷಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ.

2018ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಭಡ್ತಿ ಪಡೆದ ಇವರು ನಾವೂರು ಗ್ರಾಮ ಪಂಚಾಯತ್‌ಗೆ ವರ್ಗಾವಣೆಗೊಂಡು 3 ವರ್ಷ ಸೇವೆ ಸಲ್ಲಿಸಿ, 2021ರಲ್ಲಿ ತಾಲೂಕು ಪಂಚಾಯತ್ ನ ಲೆಕ್ಕಶಾಖೆಯಲ್ಲಿ ವಿಷಯ ನಿರ್ವಾಹಕರಾಗಿ ಮಾರ್ಚ್ 2026ರವರೆಗೆ ಸೇವೆ ಸಲ್ಲಿಸಿ, ಮಾರ್ಚ್ 1ರಿಂದ ತಾಲೂಕು ಪಂಚಾಯತ್ ನಲ್ಲಿ ಪ್ರಭಾರ ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಒಟ್ಟು 38 ವರ್ಷಗಳ ಕಾಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸೆ.30ರಂದು ನಿವೃತ್ತಿ ಹೊಂದುತ್ತಿದ್ದಾರೆ. ಇವರು ದಿ. ವೆಂಕಪ್ಪ ದೇವಾಡಿಗ ಮತ್ತು ಗಿರಿಜಾ ದಂಪತಿಗಳ ಪುತ್ರ. ವೇಣೂರು ಸರಕಾರಿ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಶ್ವೇತಾ ಅಶೋಕ್ ಇವರ ಪತ್ನಿಯಾಗಿದ್ದು, ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಅನ್ವಿತಾ ಎ. ಅವರೊಂದಿಗೆ ವೇಣೂರಿನ ಕಾಂಜಾರಕಟ್ಟೆಯಲ್ಲಿ ನೆಲೆಸಿದ್ದಾರೆ.

LEAVE A REPLY

Please enter your comment!
Please enter your name here