






ಬೆಳ್ತಂಗಡಿ: ತಾಲೂಕಿನಲ್ಲಿ ಸಂಗೀತಾಸಕ್ತರಿಗೆ ಸಿಹಿಸುದ್ದಿಯೊಂದಿದ್ದು, ಬೆಳ್ತಂಗಡಿಯಲ್ಲಿ ನೂತನವಾಗಿ ‘ಷಡ್ಜ ಸಂಗೀತ ಕಲಾ ಕೇಂದ್ರ’ ಸೆ. 23 ರಂದು ಶುಭಾರಂಭಗೊಂಡಿದೆ.
ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಯ ಮಾಲಕರಾದ ಜಿತೇಶ್ ಕುಮಾರ್ ಇವರ ಮಾತೃಶ್ರೀ ರೇವತಿ ಇವರು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿಯ ಅಧ್ಯಕ್ಷ ಜಿತೇಶ್ ಕುಮಾರ್,ಗಣೇಶ್ ಸಾಲ್ಯಾನ್ ಹಾಗೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದರು.
ಕುಮಾರಿ ಜಯಶ್ರೀ ಇವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಲಾ ಸಂಸ್ಥೆಯಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಜನೆ ಅದೇ ರೀತಿ ಕರೋಕೆ ಗಾಯನ ತಾಲೂಕಿನಲ್ಲಿ ಪ್ರಥಮ ಬಾರಿ ನಡೆಯೋದರಿಂದ ಜನರ ಮನ ಗೆಲ್ಲಲಿದೆ. ಈಗಾಗಲೇ 50ಕ್ಕೂ ಹೆಚ್ಚು ಜನ ನೋಂದಾವಣೆ ಮಾಡಿರುತ್ತಾರೆ
ಈ ಒಂದು ಅವಕಾಶವನ್ನು ತಾಲೂಕಿನ ಅತೀ ಹೆಚ್ಚು ಜನ ಸದುಪಯೋಗ ಪಡೆಯಲಿ ಎಂದು ಸಂಸ್ಥೆಯ ನಿರ್ದೇಶಕಿ ಕುಮಾರಿ ಜಯಶ್ರೀ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 94809 49682









