ನಾವೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಪನ್ನ – ಕ್ಷೀರರತ್ನ ಪುರಸ್ಕಾರ ಪ್ರದಾನ: ಹೆಚ್ಚು ಹಾಲು ಪೂರೈಸಿದ ರೈತರಿಗೆ ಬಹುಮಾನ – ರೈತರು ಸಂಘದಿಂದಲೇ ಹಿಂಡಿ ಖರೀದಿಸಿ: ವಿಸ್ತರಣಾಧಿಕಾರಿ ಸಂದೀಪ್ ಜೈನ್ ಕರೆ

0

ನಾವೂರು: ನಾವೂರು ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ. 16ರಂದು ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಮೃತ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸಂಘದ ಅಧ್ಯಕ್ಷ ಉಮೇಶ್ ಪ್ರಭು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಂಘದ ಅಭಿವೃದ್ಧಿಗೆ ಹೆಚ್ಚು ಹಾಲು ಪೂರೈಕೆ ಅಗತ್ಯ:ಸಭೆಯನ್ನು ಉದ್ದೇಶಿಸಿ ಮಾತನಾಡಿದ ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಂದೀಪ್ ಜೈನ್ ಅವರು, “ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಂಘಕ್ಕೆ ಹಾಲು ಪೂರೈಕೆ ಮಾಡಿದರೆ ಸಂಘ ಇನ್ನೂ ಹೆಚ್ಚು ಅಭಿವೃದ್ಧಿಯಾಗಲು ಸಾಧ್ಯ. ಹೆಣ್ಣು ಕರುಗಳಿಗೆ ಸಂಘದಿಂದ ಸಬ್ಸಿಡಿ ದರದಲ್ಲಿ ಹಿಂಡಿ ನೀಡಲಾಗುತ್ತದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ರೈತರು ಸಂಘದಿಂದಲೇ ಹಿಂಡಿ ಖರೀದಿಸಿ ಸಂಘವನ್ನು ಬೆಳೆಸಬೇಕು” ಎಂದು ಕರೆ ನೀಡಿದರು.

ಸಂಘದ ಕಾರ್ಯದರ್ಶಿ ಅಮಿತ ಅವರು 2025-26ನೇ ಸಾಲಿನ ವಾರ್ಷಿಕ ವರದಿ, ಜಮಾ-ಖರ್ಚು ಹಾಗೂ ಲಾಭ-ನಷ್ಟದ ವಿವರವನ್ನು ಮಂಡಿಸಿದರು.ಕ್ಷೀರರತ್ನ ಪುರಸ್ಕಾರ ಹಾಗೂ ಸನ್ಮಾನ:ಸಭೆಯಲ್ಲಿ ಸಂಘದ ಹಿರಿಯ ಸಕ್ರಿಯ ಸದಸ್ಯರನ್ನು “ಕ್ಷೀರರತ್ನ” ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಮೋಹನ ಕಾರಿಂಜ ಮತ್ತು ಪ್ರಮೋದ್ ಸಾಲಿಯಾನ್ ಮೋರ್ತಾಜೆ ಇವರನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸೋಮನಾಥ ಬಂಗೇರ, ನಿರ್ದೇಶಕರುಗಳಾದ ಸುಲೈಮಾನ್, ಟಿ.ವಿ. ಪೌಲೋಸ್, ಬಿ. ಆನಂತ ರಾಜ್ ಜೈನ್, ಪ್ರಮೋದ್ ಸಾಲಿಯಾನ್, ಜಯಾನಂದ ಸಾಲಿಯಾನ್, ತನುಜಾ ಶೇಖರ್, ಲಲಿತ, ಮಮತಾ, ಪೆರ್ನು ಗೌಡ, ಹನಿಯ, ಸತೀಶ್ ನಾಯ್ಕ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿಗಳಾದ ವಸಂತ ಎನ್, ದಿನೇಶ್, ಕುಸುಮಾವತಿ ಸಹಕರಿಸಿದರು.ಕಾಂತಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು, ಲಲಿತ ಅವರು ಸ್ವಾಗತಿಸಿದರು, ಪೆರ್ನು ಗೌಡ ಅವರು ವಂದಿಸಿದರು.

LEAVE A REPLY

Please enter your comment!
Please enter your name here