ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ – ರೂ. 6.7 ಲಕ್ಷ ಲಾಭ, 19% ಡಿವಿಡೆಂಡ್, ಲೀಟರ್‌ಗೆ 60 ಪೈಸೆ ಬೋನಸ್ ಘೋಷಣೆ

0

ಮಲವಂತಿಗೆ: ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.21 ರಂದು ಮಲವಂತಿಗೆ ಅನುದಾನಿತ ಖಾ. ಹಿ. ಪ್ರಾ. ಶಾಲಾ ವಠಾರದಲ್ಲಿ ಸಂಘದ ಅಧ್ಯಕ್ಷ ಪುರಂದರ ಗೌಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಅವರು ಅತಿಥಿ ಸ್ಥಾನದಿಂದ ಮಾತನಾಡಿ, ಹಾಲಿನ ಗುಣಮಟ್ಟ, ಹಸುಗಳಿಗೆ ನೀಡುವ ಪೌಷ್ಟಿಕ ಆಹಾರ, ಗರ್ಭದಾರಣೆ, ಪಶು ಆಹಾರ ಬಳಕೆ ಬಗ್ಗೆ ಮಾಹಿತಿ ನೀಡಿ, ಸಂಘದ ಬೆಳವಣಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.ಬೆಳ್ತಂಗಡಿ ವಿಸ್ತರಣಾಧಿಕಾರಿ ಸಂದೀಪ್ ಜೈನ್ ಅವರು ಲೆಕ್ಕ ಪರಿಶೋಧನಾ ವರದಿ ಮಂಡಿಸಿ, ಸಂಘವು ರೂ. 2,73,45,925.95 ವಹಿವಾಟು ನಡೆಸಿ, ರೂ. 6,79,658.21 ನಿವ್ವಳ ಲಾಭ ಗಳಿಸಿದ್ದು, ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ‘A’ ಶ್ರೇಣಿ ಪಡೆದಿದೆ ಎಂದು ತಿಳಿಸಿದರು.ಈ ಸಾಲಿನಲ್ಲಿ ಸದಸ್ಯರಿಗೆ 19% ಡಿವಿಡೆಂಡ್ ಮತ್ತು ಹಾಲು ಪೂರೈಸುವ ಸದಸ್ಯರಿಗೆ ಪ್ರತಿ ಲೀಟರ್‌ಗೆ 60 ಪೈಸೆ ಬೋನಸ್ ಘೋಷಿಸಲಾಯಿತು.

ಬ್ಯಾಂಕ್ ಸಾಲ ಸೌಲಭ್ಯ, ವಿಮಾ ಯೋಜನೆ ಬಗ್ಗೆ ಉಷಾ ಅವರು, ಬಯೋಗ್ಯಾಸ್ ಘಟಕದ ಬಗ್ಗೆ ಶೈಲೇಶ್ ಮಾರಾಟೆ ಅವರು, ಮಿಲ್ಕ್ ಮೆಷಿನ್ ಬಗ್ಗೆ ಸತೀಶ್ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಉಸ್ಮಾನ್ ಕೆಮ್ಮಟೆ , ವಲ್ಸಾ ಮ್ಯಾಥ್ಯೂ, ಹಾಗೂ ಅತೀ ಹೆಚ್ಚು ಹಾಲು ಪೂರೈಸಿ ಉತ್ತಮ ಸಾಧನೆ ಮಾಡಿದ ಯುವಕರಾದ ಶ್ರೀನಿವಾಸ ಗೌಡ, ಬಿ.ಎಂ. ಸಫ್ವಾನ್ ಹಾಗೂ ಮಾಜಿ ಅಧ್ಯಕ್ಷ ಎನ್.ಟಿ. ನಾರಾಯಣ ಗೌಡ ಅವರನ್ನು ಸನ್ಮಾನಿಸಲಾಯಿತು. ಮತ್ತು ದಿಡುಪೆ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕರಾದ ಶುಭಕರ್, ಶ್ವೇತಾ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಬಿ. ಸಚಿನ್ ಗೌಡ, ನಿರ್ದೇಶಕರುಹಾಗೂ , ಕಾರ್ಯದರ್ಶಿ ವೇದಾವತಿ ಉಪಸ್ಥಿತರಿದ್ದರು. ಅಧ್ಯಕ್ಷ ಪುರಂದರ ಗೌಡ ಪ್ರಸ್ತಾಪಿಸಿ ,ಮೋಹಿನಿ ಪ್ರಾರ್ಥಿಸಿ, ಸುಂದರ ಗೌಡ ಸ್ವಾಗತಿಸಿ, ಎಚ್ ಜಯಂತ ಹೆಗ್ಡೆ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here