ಬೆಂಗಳೂರು ಅರಮನೆ ಮೈದಾನದಲ್ಲಿ ಅಕ್ಟೋಬರ್ 25 ರಂದು ‘ಶ್ರೀ ಸಿದ್ಧ ನವಗ್ರಹ ತೀರ್ಥಂಕರ ಮಹಾ ಆರಾಧನೆ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶ್ರೀ ಕ್ಷೇತ್ರದಿಂದ ಆಶೀರ್ವಚನ​

0

ಬೆಳ್ತಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ದಿನಾಂಕ 25/10/2026 ರಂದು ಭಾನುವಾರದಂದು ‘ಶ್ರೀ ಸಿದ್ಧ ನವಗ್ರಹ ತೀರ್ಥಂಕರ ಮಹಾ ಆರಾಧನೆ’ ಯು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.​ಆಚಾರ್ಯ ಶ್ರೀ ಅನೇಕಾಂತ ಸಾಗರ ಮುನಿ ಮಹಾರಾಜರು, ಚತುರ್ವಿಧ ಸಂಘ ಹಾಗೂ ನಾಡಿನ ಸಮಸ್ತ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಮಹೋತ್ಸವ ಜರುಗಲಿದೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಸಹ ಭಾಗವಹಿಸಲಿದ್ದಾರೆ. ​ಕಾರ್ಯಕ್ರಮದ ವಿಶೇಷತೆಯ ಕುರಿತು ಮಾತನಾಡಿದ ಜಗದ್ಗುರು ಡಾ| ಸ್ವಸ್ತಿಶ್ರೀ ಶ್ರೀ ಮದ್ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು, ಈ ಅಭೂತಪೂರ್ವ ಆರಾಧನೆಯ ಮಹತ್ವವನ್ನು ವಿವರಿಸಿದರು. ಕೇವಲ 1008 ವ್ರತಿಕರಿಗೆ ಮಾತ್ರ ಆರಾಧನೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶವಿರುವುದರಿಂದ, ನಾಡಿನ ಸಮಸ್ತ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಧರ್ಮಲಾಭ ಪಡೆದುಕೊಳ್ಳುವಂತೆ ಆಶೀರ್ವಚನ ನೀಡಿದರು.

​ಇತ್ತೀಚೆಗೆ ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಸಮುಚ್ಚಯದಲ್ಲಿರುವ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮನವರ ಸಭಾಭವನದಲ್ಲಿ ನೂರಾರು ಜನರ ಸಮ್ಮುಖದಲ್ಲಿ ಜರುಗಿದ ವಿದ್ಯಾಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಪೂಜ್ಯ ಶ್ರೀಗಳು ಈ ಕರೆ ನೀಡಿದರು.​ಈ ಶುಭ ಸಂದರ್ಭದಲ್ಲಿ ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಕೆ. ಜಯವರ್ಮರಾಜ ಬಳ್ಳಾಲ್, ಪ್ರಮುಖರಾದ ಪ್ರಸನ್ನಕುಮಾರ್ ಪಡೀವಾಳ್ ಹಾಗೂ ಜೈನ್ ಮಿಲನ್ ವಲಯ ನಿರ್ದೇಶಕರಾದ ವೀರ್ ಬಿ. ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭವನ್ನು ಶಿಕ್ಷಕರಾದ ಧರಣೇಂದ್ರ ಕೃ. ಜೈನ್ ಅಂದವಾಗಿ ನಿರೂಪಿಸಿದರು.

LEAVE A REPLY

Please enter your comment!
Please enter your name here