ಪರಿಶಿಷ್ಟ ಜಾತಿಯ ರೈತರಿಗೆ ತರಕಾರಿ ಬೀಜ ವಿತರಣಾ ಕಾರ್ಯಕ್ರಮ

0

ಬೆಳ್ತಂಗಡಿ : ಐಸಿಎಆರ್ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡು ಕೇರಳ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ ಹಾಗೂ ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ ಇವರ ಸಂಯುಕ್ತ ಆಶಯದಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಸೆ. 21 ರಂದು ಉಜಿರೆ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷ ವಿನುತ ರಜತ್ ಗೌಡ ಅಧ್ಯಕ್ಷತೆ ವಹಿಸಿ,ಇದು ಬಹಳ ಒಳ್ಳೆಯ ಕಾರ್ಯಕ್ರಮ ರೈತರು ಇದನ್ನು ಬಳಸಿಕೊಂಡು ಉತ್ತಮ ಆದಾಯದೊಂದಿಗೆ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.ಸರಕಾರ ವಿಜ್ಞಾನಿ ಗಳನ್ನು ಮತ್ತು ರೈತರನ್ನು ಒಂದು ಗೂಡಿಸಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸರಕಾರ ಮತ್ತು ವಿಜ್ಞಾನಿ ಗಳ ಶ್ರಮವನ್ನು ಶ್ಲಾಘಿಸಿದರು. ನಂತರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಆದ ಡಾ.T J ರಮೇಶ್ ಇವರು ಈ ಹಿಂದೆ ಉಜಿರೆ ಗ್ರಾಮದಲ್ಲಿ 25 ರೈತರಿಗೆ ತೆಂಗಿನ ಸಸಿ ವಿತರಣೆ ಮಾಡಿದ್ದು ಉತ್ತಮವಾಗಿ ಬಂದಿರುತ್ತದೆ ಆದ್ದರಿಂದ ರೈತರಿಗೆ ತರಕಾರಿ ಬೀಜವನ್ನು ವಿತರಿಸಿ ಮತ್ತೆ ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆನ್ನುವುದೇ ಐಸಿಎಆರ್ ವಿಜ್ಞಾನಿಗಳ ಮುಖ್ಯ ಉದ್ದೇಶವಾಗಿದೆ ಇದನ್ನು ರೈತರು ಬಳಸಿಕೊಂಡು ಉತ್ತಮ ಆದಾಯ ಪಡೆಯಬೇಕು ಎಂದು ತಿಳಿಸಿದರು.

ಐಸಿಎಆರ್ ಕಾಸರಗೋಡು ವಿಜ್ಞಾನಿ ಡಾ.ರಾಜಕುಮಾರ್ ಇವರು ಮಾತಾಡಿ ಕೊಟ್ಟಿರುವ ಬಿತ್ತನೆ ಬೀಜವನ್ನು ಉತ್ತಮವಾಗಿ ಬೆಳೆದು ಅದರ ಮಾಹಿತಿಯನ್ನು ನಮಗೆ ತಿಳಿಸಬೇಕು ಹಾಗೂ ಮುಂದೆಯೂ ಇಂತಹ ಯೋಜನೆಗಳು ಬಂದಲ್ಲಿ ಅದನ್ನು ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಐಸಿಎಆರ್ ಸಂಸ್ಥೆಯ ಬಹಳ ಒಳ್ಳೆಯ ಸಂಸ್ಥೆಯಾಗಿದ್ದು ಉತ್ತಮವಾದ ತರಕಾರಿ ಬೀಜಗಳು ರೈತರಿಗೆ ತುಂಬಾ ಉಪಯೋಗವಾಗಲಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾಕರ್ ಮಯ್ಯ ಜೀವಾಮೃತ ಹಾಗೂ ಸಾವಯವ ಕೃಷಿ ಮಾಡುವ ವಿಧಾನವನ್ನು ರೈತರಿಗೆ ಸವಿವರವಾಗಿ ತಿಳಿಸಿದರು. ತರಕಾರಿ ಕೃಷಿ ಮಾಡುವ ವೈಜ್ಞಾನಿಕ ವಿಧಾನದ ಬಗ್ಗೆ ರೈತರಿಗೆ ತರಬೇತಿ ನೀಡಿ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಪ್ರೇರಣಾ ಸಂಜೀವಿನಿ ಒಕ್ಕೂಟ ದ ಕೃಷಿ ಸಖಿ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆಗೈದು , ಸ್ವಾಗತಿಸಿದರು ಒಕ್ಕೂಟದ MBK ಸಂಧ್ಯಾ ಧನ್ಯವಾದವಿತ್ತರು.

ನಂತರ ಪ್ರಭಾಕರ ಮೈಯ್ಯ ಇವರ ತೋಟಕ್ಕೆ ತೆರಳಿ ಕ್ಷೇತ್ರ ಭೇಟಿ ಮಾಡಲಾಯಿತು.

LEAVE A REPLY

Please enter your comment!
Please enter your name here