







ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿಯನ್ನು ಸೆ.17 ರಂದು ಬೆಳ್ತಂಗಡಿಯ ಸಾನ್ತೋಮ್ ಟವರ್‌ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್ ವಹಿಸಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ.ಫಾ. ಆದರ್ಶ್ ಪಿ.ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಕ್ರಾಸ್ ಸಂಸ್ಥೆ ಬೆಂಗಳೂರು ಇದರ ಮಹಿಳಾ ಸಬಲೀಕರಣ ಯೋಜನೆಯ ರಾಜ್ಯ ಸಂಯೋಜಕ ರಾಜಶೇಖರ್ ತರಬೇತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ವೇದಿಕೆಯಲ್ಲಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಇದರ ಉಪಾಧ್ಯಕ್ಷೆ ಫಿಲೋಮಿನಾ ಥೋಮಸ್ ಹಾಗೂ ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಸಿಸಿಲ್ಯಾ ತಾವ್ರೊ ಉಪಸ್ಥಿತರಿದ್ದರು.
ಕಿರಣ್ ಒಕ್ಕೂಟದ ಕೋಶಾಧಿಕಾರಿ ಹಾಗೂ ತಂಡದ ಸದಸ್ಯರಾದ ಚಂದನಾ ಎಲ್ಲರನ್ನು ಸ್ವಾಗತಿಸಿದರು. ಸ್ನೇಹ ಜ್ಯೋತಿ ಒಕ್ಕೂಟದ ಅಧ್ಯಕ್ಷೆ ಫಿಲೋಮಿನಾ ಥೋಮಸ್ ವಂದಿಸಿದರು. ಸಿಸಿಲ್ಯಾ ತಾವ್ರೊ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಶಿಬಿರದಲ್ಲಿ ಒಟ್ಟು 31 ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು.









