







ಬೆಳ್ತಂಗಡಿ: ಕಥೊಲಿಕ್ ಮಹಿಳೆಯರ ಮಂಡಳಿ, ಬೆಳ್ತಂಗಡಿ ವಲಯದ ವತಿಯಿಂದ ಕನ್ಯಾ ಮರಿಯಮ್ಮ ರವರ ಹುಟ್ಟುಹಬ್ಬ ಹಾಗೂ ತೆನೆ ಹಬ್ಬದ ಕೂಟವನ್ನು ಬೆಳ್ತಂಗಡಿ ಚರ್ಚ್‌ನ ಹೋಲಿ ರೆಡೀಮರ್ ಸಭಾಂಗಣದಲ್ಲಿ ಸೆ. 20 ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳ್ತಂಗಡಿ ಹೋಲಿ ರೆಡೀಮರ್ ವಲಯ ಮಟ್ಟದ ಧರ್ಮಗುರುಗಳಾದ ಫಾ. ವಾಲ್ಟರ್ ಡಿಮೆಲ್ಲೊ ವಹಿಸಿದ್ದರು. ಬೆಳ್ತಂಗಡಿ ವಲಯದ ನಿರ್ದೇಶಕರಾದ ವಂ.ಫಾ. ಆಬೆಲ್ ಲೋಬೊ ಕಾರ್ಯಕ್ರಮದ ನೇತೃತ್ವ ವೀಕ್ಷಿಸಿದರು.ವೇದಿಕೆಯಲ್ಲಿ ವಲಯ ಅಧ್ಯಕ್ಷೆ ಗ್ರೇಸಿ ಲೋಬೊ, ವಲಯ ಕಾರ್ಯದರ್ಶಿ ಲೀನಾ ಕ್ರಾಸ್ತಾ, ಬೆಳ್ತಂಗಡಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಸಂಯೋಜಕ ಶ್ರೀ ತೋಮಸ್ ಪಿಂಟೊ ಹಾಗೂ ಬೆಳ್ತಂಗಡಿ ಕನ್ಯಾ ಮಠದ ಧರ್ಮ ಭಗಿನಿಯರಾದ ಸಿ. ಜೆಸಿಂತಾ ಬಾರೆಟ್ಟೊ ಉಪಸ್ಥಿತರಿದ್ದರು.


ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಸಂಭ್ರಮಈ ಹಬ್ಬದ ಕೂಟದಲ್ಲಿ ಒಟ್ಟು 12 ಚರ್ಚ್ ಘಟಕಗಳಿಂದ ಅಂದಾಜು 350ಕ್ಕೂ ಅಧಿಕ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು. ಮಹಿಳೆಯರಿಗಾಗಿ ಹೂಗುಚ್ಚ ತಯಾರಿಕೆ ಸ್ಪರ್ಧೆ, ಜಪಸರ ಸ್ಪರ್ಧೆ ಹಾಗೂ ವೆಲಂಕಣಿ ಮಾತೆಯ ಛದ್ಮವೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತ ಸ್ಪರ್ಧಿಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.
ನಂತರ 12 ಚರ್ಚ್ ಘಟಕಗಳ ಸದಸ್ಯೆಯರು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡುವ ಮೂಲಕ ರಂಜಿಸಿದರು.ವಿಶೇಷ ಸಾಧಕರಿಗೆ ಸನ್ಮಾನ
ಬೆಳ್ತಂಗಡಿ ವಲಯದ ವಿವಿಧ ಚರ್ಚ್ ಘಟಕಗಳಲ್ಲಿ ಗಣನೀಯ ಹಾಗೂ ವಿಶೇಷ ಸಾಧನೆ ಗೈದ ಒರ್ವೊಬ್ಬ ಸದಸ್ಯೆಯರನ್ನು ಗುರುತಿಸಿ ಈ ವೇಳೆ ಆತ್ಮೀಯವಾಗಿ ಸನ್ಮಾನಿಸಲಾಯಿತು.ವಲಯ ಅಧ್ಯಕ್ಷೆ ಶ್ರೀಮತಿ ಗ್ರೇಸಿ ಲೋಬೊ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ನತಾಲಿಯ ವೇಗಸ್ ಮತ್ತು ಶ್ರೀಮತಿ ಜ್ಯೋತಿ ಪ್ರಿಯಾ ಡಿಕುನ್ಹಾ (ವೇಣೂರು) ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಲಯ ಕಾರ್ಯದರ್ಶಿ ಶ್ರೀಮತಿ ಲೀನಾ ಕ್ರಾಸ್ತಾ (ಅಳದಂಗಡಿ) ವಂದನಾರ್ಪಣೆಗೈದರು.









