






ಮಚ್ಚಿನ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕರಿ ಸಂಘ 2025.26 ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯು ಸಂಘದ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್ ಇವರ ಅಧ್ಯಕ್ಷತೆಯಲ್ಲಿ ಅ 21 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಸದಸ್ಯರ ಸಹಕಾರದಿಂದ ಸಹಕಾರಿ ಸಂಘಕ್ಕೆ ಸ್ವತಃ ಕಟ್ಟಡದೊಂದಿಗೆ ಹಲವು ವರ್ಷಗಳಿಂದ ಪ್ರಗತಿಯನ್ನು ಕಾಣುತ್ತಿದೆ. ಒಟ್ಟು ವ್ಯವಹಾರ ಹಾಗೂ ಲಾಭದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡು ಬಂದಿದೆ.
ಸಂಘದ ವರದಿ ವರ್ಷದಲ್ಲಿ 1.90 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ 1.02.13.388.45 ಲಾಭ ಗಳಿಸಿ. ಸದಸ್ಯರಿಗೆ ಶೇಕಡ 20% ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್ ತಿಳಿಸಿದರು.


ಇನ್ನಷ್ಟು ಬೆಳವಣಿಗೆಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿದರು.ಈ ಎಲ್ಲಾ ಸಾಧನೆಗಳ ಹಿಂದೆ ಆಡಳಿತ ಮಂಡಳಿಯವರ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಮತ್ತಷ್ಟು ಪ್ರಗತಿಗೆ ಸಹಕಾರಿಯಾಗಿದೆ ಮುಂದಿನ ದಿನಗಳಲ್ಲಿ ನೂತನ ಕಟ್ಟಡದ ಲಿಫ್ಟ್ ನಿರ್ಮಿಸುವ ಯೋಚನೆ ನಮ್ಮದಾಗಿದೆ ಮುಂದಿನ ಇನ್ನಷ್ಟು ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ಉಪಾಧ್ಯಕ್ಷರಾದ ಶ್ರೀಧರ ಪೂಜಾರಿ ಕೆ ನಿರ್ದೇಶಕರಾದ. ಗಣೇಶ್ ಅರ್ಕಜೆ. ಮೋಹನ್ ಗೌಡ. ಸುಜಾತಾ ಪಿ ಸಾಲ್ಯಾನ್. ರಾಜೇಶ್ ನಾಯ್ಕ. ಶ್ರೀಮತಿ ಬೇಬಿ. ಆನಂದ. ಚಿತ್ತರಂಜನ್ ಕೆ. ತುಂಗಪ್ಪ. ಉಮೇಶ್. ಜಯರಾಮ್. ವಲಯ ಮೇಲ್ವಿಚಾರಕರಾದ ಸಿರಾಜುದ್ದೀನ್. ಮುಖ್ಯ ಕಾರ್ಯನಿರ್ವಣಾಧಿಕಾರಿ ಯಕ್ಷಣ್ ಉಪಸ್ಥಿತರಿದ್ದರು ಸಿಬ್ಬಂದಿಗಳಾದ ಏಕಲತ ಪಿ ಶೆಟ್ಟಿ ಪ್ರಾರ್ಥಿಸಿ. ಯಕ್ಷಣ್ ವರದಿ ಮಂಡಿಸಿದರು. ಶ್ರೀಧರ ಪೂಜಾರಿ ಕೆ ಸ್ವಾಗತಿಸಿ ಮೋಹನ್ ಗೌಡ ವಂದಿಸಿದರು ಸಂಘದ ಸಿಬ್ಬಂದಿಯರಾದ ಸೌಜನ್ಯ ಏನ್ ಬಿ ನಿರೂಪಿಸಿದರು ಸಂಘದ ಸಿಬ್ಬಂದಿಗಳಾದ ಗಣೇಶ್. ವನಿತಾ. ಕಿಶೋರ್ ಭವ್ಯ ಸಹಕರಿಸಿದರು.
✍️ವರದಿ ಹರ್ಷ ಬಳ್ಳಮಂಜ









