ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ

0

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ನಿ.) ಯು ಹನ್ನೊಂದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಸೆಪ್ಟಂಬರ್ 12 ರಂದು 2025-26ನೇ ಸಾಲಿನ ಮಹಾಸಭೆಯನ್ನು ನಡೆಸಲಾಯಿತು.

ಸದೃಢ ಸಮಾಜದ ಉದ್ದೇಶದೊಂದಿಗೆ ಸೊಸೈಟಿಯು ಪ್ರಾರಂಭಗೊAಡಿದ್ದು ಇಂದು ಸಮಾಜದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜನರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಮಾಜದ ಅಗತ್ಯತೆಗಳನ್ನು ಪೂರೈಸುವಲ್ಲಿಯೂ ಪ್ರಧಾನ ಪಾತ್ರ ವಹಿಸಿದೆ ಎಂದು ಸಂಘದ ಗೌರವಾಧ್ಯಕ್ಷ ಫಾ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ಅಭಿನಂದಿಸಿದರು.

ಸೆ. 12 ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಲೆನ್ಸಿ ಪಿಂಟೊ ವಹಿಸಿ ಮಾತನಾಡಿದರು. 2025-26ನೇ ಆರ್ಥಿಕ ವರ್ಷಾಂತ್ಯಕ್ಕೆ ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2863 ಸದಸ್ಯರನ್ನು ಹೊಂದಿದ್ದು ರೂ. 39.47 ಕೋಟಿ ದುಡಿಯುವ ಬಂಡವಾಳದೊAದಿಗೆ ಆರ್ಥಿಕ ವರ್ಷದಲ್ಲಿ ರೂ 124.98 ಕೋಟಿ ವ್ಯವಹಾರ ನಡೆಸಿ ಶೇಕಡ 96 ವಸೂಲಾತಿಯೊಂದಿಗೆ ರೂ.102.75 ಒಟ್ಟು ಲಾಭಗಳಿಸಿದ್ದು ಇದರಲ್ಲಿ ರೂ 39.29 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿ ಸಂಘದ ಸದಸ್ಯರಿಗೆ 25% ಡಿವಿಡೆಂಡ್‌ನ್ನು ಅಧ್ಯಕ್ಷ ಲೆನ್ಸಿ ಪಿಂಟೊರವರು ಘೋಷಿಸಿದರು.

ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ : ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಡಿಗ್ರಿ ಕಾಲೇಜಿನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ಮಹಮ್ಮದ್ ಸಿಯಾನ್ ಮತ್ತು ಪಿ. ಮಹಾಬಲೇಶ್ವರ ಶರ್ಮರವರು ಯುನಿವರ್ಸಿಟಿ ಮಟ್ಟದ ಖಿeಟಿಟಿisನಲ್ಲಿ ಹಾಗೂ 2ಟಿಜ ಃ.ಛಿom ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ Shihಚಿbuಜಜeeಟಿ ಖಿhಚಿbsheeಡಿ ಉತ್ತಮ ದೇಹದಾಢ್ಯತೆ (ಃesಣ Phಥಿsique) ನಲ್ಲಿ ಸ್ವರ್ಣ ಪದಕ ಗಳಿಸಿರುತ್ತಾರೆ ಮತ್ತು ಪಿ.ಯು.ಸಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೀತೇಶ್ ಪೂಜಾರಿಯವರು ಜಿಲ್ಲಾ ಮಟ್ಟದ 800ಮೀಟರ್ ಓಟದಲ್ಲಿ ಬೆಳ್ಳಿ ಪದಕ ಹಾಗೂ ಕುಮಾರಿ ನವ್ಯ, ನಡಿಗೆ ಓಟ (Wಚಿಟಞ ಖಚಿಛಿe)ನಲ್ಲಿ ಬೆಳ್ಳಿ ಪದಕ ಪಡೆದು ರಾಜ್ಯಮಟ್ಟದಲ್ಲಿ ಭಾಗವಹಿಸಿರುತ್ತಾರೆ, ಈ 5 ಮಂದಿ ಕ್ರೀಡಾ ಸಾಧಕರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ ತಲಾ ರೂ. 10,000/- ಪ್ರೋತ್ಸಾಹಕ ಧನವನ್ನು ನೀಡಲಾಯಿತು. ಜೊತೆಗೆ ಸೇಕ್ರೆಡ್ ಹಾರ್ಟ್ ಮಹಾ ವಿದ್ಯಾಲಯದ ಕ್ರೀಡಾ ಚಟುವಟಿಕೆಗಳಿಗಾಗಿ ರೂ.1,00,000/- ದ ಚೆಕ್ಕನ್ನು ಸೇಕ್ರೆಡ್ ಹಾರ್ಟ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರಾರವರಿಗೆ ಹಸ್ತಾಂತರಿಸಲಾಯಿತು. ಸಂಘವು ಆರ್ಥಿಕ ವರ್ಷದ ಲೆಕ್ಕ ಪರಿಶೋಧನೆಯಲ್ಲಿ ಎ ಮಾನ್ಯತೆ ಪಡೆದಿದ್ದು ಕಳೆದ ಸತತ 9 ವರ್ಷಗಳಿಂದ ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡುತ್ತಿದ್ದು, ಸಂಘವು ಕೇವಲ ಬ್ಯಾಂಕಿAಗ್ ವ್ಯವಹಾರ ಮಾತ್ರವಲ್ಲದೇ ಸಾಮಾಜಿಕ, ಶೈಕ್ಷಣಿಕ ಹಾಗೂ ಇನ್ನಿತರ ಹಲವು ಚಟುವಟಿಕೆಗಳಿಗೆ ಆರ್ಥಿಕ ನೆರವನ್ನು ನಿರಂತರವಾಗಿ ನೀಡುತ್ತಿರುವುದು ಸಂತಸದ ವಿಚಾರ ಎಂದು ಸಂಘದ ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಂಡೆತ್ಯಾರು ತಿಳಿಸಿದರು.ಸೇಕ್ರೆಡ್ ಹಾರ್ಟ್ ಚರ್ಚ್ನ ಪ್ರಧಾನ ಧರ್ಮಗುರುಗಳಾದ ವಂ. ಫಾ. ಸ್ಟಾನಿ ಗೋವಿಯಸ್, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂ.ಫಾ.ದೀಪಕ್ ಲಿಯೋ ಡೇಸಾ, ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರಾ, ಸಂಘದ ವೃತ್ತಿಪರ ನಿರ್ದೇಶಕರಾದ ಲಿಯೋ ನೊರೋನ್ಹಾ, ಫೆಲಿಕ್ಸ್ ಡಿ ಕೋಸ್ತಾ, ನಿರ್ದೇಶಕರಾದ ಸಿರಿಲ್ ಸಿಕ್ವೇರಾ, ಜೋಯಲ್ ಗೋಡ್ ಫ್ರೀ ಮೆಂಡೋನ್ಸ, ಗ್ರೆಗೊರಿ ಸೇರಾ, ರೊನಾಲ್ಡ್ ಸಿಕ್ವೇರಾ, ಗ್ರೇಸಿ ರೀಟಾ ರೆಬೆಲ್ಲೊ, ವಿವೇಕ್ ವಿನ್ಸೆಂಟ್ ಪಾÊಸ್, ಮೋಲಿ ಫೆರ್ನಾಂಡಿಸ್, ಲಿಯೋ ರೊಡ್ರಿಗಸ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಲೇರಿಯನ್ ಡಿ ಸೋಜಾ ವರದಿ ವಾಚಿಸಿದರು. ಉಪಾಧ್ಯಕ್ಷರಾದ ಫ್ರಾನ್ಸಿಸ್ ವಿ.ವಿ. ಸ್ವಾಗತಿಸಿ, ನಿರ್ದೇಶಕರಾದ ಸೆಲೆಸ್ತಿನ್ ಡಿ ಸೋಜಾರವರು ವಂದಿಸಿದರು. ರೋಬಿನ್ ಸೇರಾ ನಿರೂಪಿಸಿದರು. ಸಿಬ್ಬಂದಿ ಡೋನ್ ಪ್ರವೀಣ್ ಕ್ರಾಸ್ತಾ, ಶ್ವೇತಾ ರಾವ್, ಜೀವನ್, ರಮೇಶ್ ಹಾಗೂ ಅಲ್ವಿನ್ ಪಿಂಟೊ ಸಹಕರಿಸಿದರು.ವರದಿ : ವಿವೇಕ್ ವಿ. ಪಾÊಸ್

LEAVE A REPLY

Please enter your comment!
Please enter your name here