







ಬೆಳ್ತಂಗಡಿ: ತಾಲೂಕಿನ ಕಕ್ಕಿಂಜೆಯಲ್ಲಿರುವ ವಿ.ವಿ. ಟವರ್ ನಲ್ಲಿ ‘ವಿ.ವಿ. ಗ್ರೀನ್ ಸೋಲಾರ್ ಸೊಲ್ಯೂಷನ್’ ಸಂಸ್ಥೆಯ ನೂತನ ಮಳಿಗೆಯು ಸೆ. 19 ರಂದು ವಿಜೃಂಭಣೆಯಿಂದ ಶುಭಾರಂಭಗೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ – ಕನಸಿನ ಮನೆ ಸಂಸ್ಥೆಯ ಮಾಲಕರು ನೂತನ ಮಳಿಗೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಸಂಸ್ಥೆಯ ಬೆಳವಣಿಗೆಗೆ ಶುಭಹಾರೈಸಿದರು.ಇದೇ ಸಂದರ್ಭದಲ್ಲಿ ತೊಟ್ಟತ್ತಾಡಿ ಸೈಂಟ್ ಆಂಥೋನಿ ಫೋರೆನ್ ಚರ್ಚ್ ನ ಅಧ್ಯಕ್ಷರಾದ ರೆವರೆಂಡ್ ಫಾದರ್ ಸಬಾಸ್ಟಿನ್ ಅವರು ಉಪಸ್ಥಿತರಿದ್ದು ಆಶೀರ್ವಚನ ನೀಡಿ ಶುಭಕೋರಿದರು.


ಈ ಸಂದರ್ಭದಲ್ಲಿ ವರ್ಜಿನ್ ಸೋಲಾರ್ ಕಂಪನಿಯ ಕರ್ನಾಟಕ ಮುಖ್ಯಸ್ಥರಾದ ಜಾರ್ಜ್ ಡ್ಯಾನಿಯೇಲ್, ದಕ್ಷಿಣ ಕನ್ನಡ ವಲಯದ ಬ್ಯಾಂಕ್ ಡೈರೆಕ್ಟರ್ ಜಯಕರ್ ಸೋನ್ಸ್ ಮಾಂಡೋವಿ ಮೋಟರ್ಸ್ ಚಾರ್ಮಾಡಿ ಶಾಖೆಯ ಮ್ಯಾನೇಜರ್ ಚರಣ್ ವರ್ಜಿನ್ ಸೋಲಾರ್ ಸೊಲ್ಯೂಷನ್ಸ್ ಏರಿಯಾ ಸೇಲ್ಸ್ ಮ್ಯಾನೇಜರ್ ಶ್ರೇಯಸ್ ಹಾಗೂ V & V ಮಾರುತಿ ಸರ್ವಿಸ್ ಸ್ಟೇಷನ್ ಮಾಲಕರಾದ ಬಾಬುರಾಜ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ನೂತನ ಮಳಿಗೆಯಲ್ಲಿ ಗೃಹಬಳಕೆ, ವಾಣಿಜ್ಯ ಹಾಗೂ ಕೃಷಿ ಉದ್ದೇಶಕ್ಕಾಗಿ ಸೋಲಾರ್ ಅಳವಡಿಕೆ ಹಾಗೂ EV ಚಾರ್ಜಿಂಗ್ ಸ್ಟೇಷನ್ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ಸಂಸ್ಥೆ ಮಾಲಕರು ತಿಳಿಸಿದರು.









