







ಬೆಳ್ತಂಗಡಿ : ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಮಹಾ ಸಭೆಯು ಸಂಘದ ಅಧ್ಯಕ್ಷ ಅನಿಲ್ ಎ. ಜೆ ಯವರ ಅದ್ಯಕ್ಷತೆಯಲ್ಲಿ ಜ್ಯೋತಿ ಹಾಸ್ಪಿಟಲ್ ಬಳಿ ಇರುವ ಸಂಗಮ ಸಭಾಭವನದಲ್ಲಿ ನಡೆಯಿತು.
2010ರಲ್ಲಿ ಪ್ರಾರಂಭವಾದ ಸಂಘವು ಯಶಸ್ವಿಯಾಗಿ 16 ವರ್ಷಗಳನ್ನು ಪೂರೈಸಿ 17ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಸಂಘದಲ್ಲಿ ಪ್ರಾರಂಭದಲ್ಲಿ 335ಸದಸ್ಯರು ಇದ್ದು ಪ್ರಸ್ತುತ 3848 ಸದಸ್ಯರನ್ನು ಹೊಂದಿದ್ದು, ಸಂಘವು ರೂ.44ಕೋಟಿ ಠೇವಣಿ ಸಂಗ್ರಹಿಸಿ, ರೂ 33ಕೋಟಿ ಸಾಲ ವಿತರಿಸಿ ರೂ 271ಕೋಟಿ ವ್ಯವಹಾರ ನಡೆಸಿ ರೂ. 93 ಲಕ್ಷ ನಿವ್ವಳ ಲಾಭಗಳಿಸಿದೆ ಎಂದರು. ಶೇರುದಾರರಿಗೆ ಶೇ 17%ದಿವಡೆಂಡ್ ಘೋಷಿಸಿದರು.


ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ: ಸಭೆಯಲ್ಲಿ ಜನ ಸೇವೆಗೆ ರಕ್ಷಿತ್ ಶಿವರಾಂ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸದಸ್ಯರ ಕುಟುಂಬಗಳಿಗೆ ಅರೋಗ್ಯ ಇಲಾಖೆ ಅಮ್ಮಿ ಸಿಸ್ಟರ್, ಪೊಲೀಸ್ ಇಲಾಖೆ ವೇಣೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ಓಮನ, ಅಭಕಾರಿ ಇಲಾಖೆ ವಿನೋಯ್ ಸಿ. ಜೆ., ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸುತ್ತಿರುವ ಜಾರ್ಜ್ ಪಿ. ಎಸ್, ವೀಣಾ ಕೆ, ಶುಭ ಪೌಲ್, ಫ್ಲೆವಿ, ಬೇಬಿ ಜೋಸೆಫ್, ಶೋಭಾ ಕೆ. ಡಿ,ರೋಸಾ ವಿ.ಟಿ., ಅನಿತಾ ಜಾನ್, ಮೇರಿ ಎನ್. ಜೆ., ಇವರನ್ನು ಶಿಕ್ಷಣ ಇಲಾಖೆ ಯಲ್ಲಿ ನೀಡಿದ ಸೇವೆಗೆ ಸನ್ಮಾನಿಸಲಾಯಿತು.
ಪಿಗ್ಮಿ ಸಂಗ್ರಹಕರನ್ನು, ಎಸ್ ಎಸ್ ಎಲ್ ಸಿ ಯಲ್ಲಿ ಮತ್ತು ಪಿ ಯು ಸಿ ಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಹಿತು. ಉಪಾಧ್ಯಕ್ಷರಾದ ಜಾರ್ಜ್ ಎಂ. ವಿ.ನಿರ್ದೇಶಕರುಗಳಾದ ಸೆಬಾಸ್ಟಿನ್ ವಿ.ಟಿ, ಅಂದಾನಿ ಕೆ. ಡಿ, ಜೈಸನ್ ಪಿ. ಎಸ್, ಬಾಬು ತೋಮಸ್, ಬಿಜು ಪಿ.ಪಿ., ಸೆಬಾಸ್ಟಿನ್, ಜಾಕೋ ಎನ್ .ಕೆ, ಸೆಬಸ್ಟಿನ್ ಪಿ. ಟಿ, ಅಜಯ್ ಕೆ. ಎ., ಸೋಫಿ ಜೋಸೆಫ್, ಫಿಲೋಮಿನಾ ವಿ., ಲಾಲಿ ಮಾಣಿ, ನಾಮ ನಿರ್ದೇಶಕರಾದ ದೇವಸ್ಯ ಎಂ. ಪಿ., ಮಾತುಕುಟ್ಟಿ ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕ ರಾದ ಮ್ಯಾತ್ಯು ಕೆ. ಕೆ, ಸುಜಾ ಜೇಮ್ಸ್, ಸ್ಟೆನಿ ಎನ್ ಎಸ್, ಅಲಿನಾ ಇ ಜೆ, ಗುಮಾಸ್ತರಾದ ಸುಶ್ಮಿತಾ ಟಿ ಎಸ್, ವಿಲ್ಸನ್ ಡಿಸೋಜಾ, ಸುಭಿಕ್ಷಾ, ಮಿನಿ ಮೋಳ್, ಕಾವ್ಯ ಎಂ. ಜೆ., ಡಾನಿಯ ಜೋಸೆಫ್, ನವ್ಯಶ್ರೀ, ಅಲ್ಫೋನ್ಸ ಸಿ. ಆರ್, ಸ್ಮಿತಾ ಪಿ. ಎಫ್, ರಶ್ಮಿ ಎಂ. ಡಿ, ಚಾಕೊ ಪಿ. ಜಿ, ಚಾರ್ಲ್ಸ್ ಜೋಲಿ, ಪೂಜಿತಾ ಸಹಕರಿಸಿದರು.
ಈ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ. ಎ. 2025-26 ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು. ಉಪಾಧ್ಯಕ್ಷ ಜಾರ್ಜ್ ಎಂ. ವಿ.ಸ್ವಾಗತಿಸಿದರು. ನಿರ್ದೇಶಕ ಸೆಬಸ್ಟಿನ್ ಪಿ. ಟಿ. ವಂದಿಸಿದರು. ಸುಜಾ ಮತ್ತು ಸುಸ್ಮಿತಾ ನಿರೂಪಿಸಿದರು.









