ಸುಧನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

0

ಬೆಳ್ತಂಗಡಿ : ಸುಧನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನವಾರ್ಷಿಕ ಸರ್ವಸದಸ್ಯರ ಸಭೆಯು ಸೆ.19ರಂದು ಗುರುವಾಯನಕೆರೆ ‘ನಮ್ಮ ಮನೆ ಹವ್ಯಕ ಭವನ’ದಲ್ಲಿ ಸಂಘದ ಅಧ್ಯಕ್ಷ ಎಂ.ವಿ. ಭಟ್ಅದ್ಯಕ್ಷತೆಯಲ್ಲಿ ಜರಗಿತು.

ಸಂಘವು 547ಸದಸ್ಯರನ್ನು ಹೊಂದಿದ್ದು 8,94,500ಲಕ್ಷ ಪಾಲು ಬಂಡವಾಳದೊಂದಿಗೆ ರೂ. 95,68,173ಲಕ್ಷ ದುಡಿಯುವ ಬಂಡವಾಳ ಹೊಂದಿದೆ.ವರ್ಷ ಅಂತ್ಯ ಕ್ಕೆ ರೂ. 49,12,691/-ಠೇವಣಿ ಸಂಗ್ರಹಿಸಲಾಗಿದೆ. ಸಂಘದಲ್ಲಿ ಪಡೆದುಕೊಂಡ ಸಾಲ ಮರುಪಾವತಿ ಮಾಡಿದಲ್ಲಿ ಸಂಘವು ಲಾಭದತ್ತ ಮುನ್ನಡೆಯುತ್ತದೆ ಎಂದರು. ಸಾಲ ವಸೂಲಿ ಬಗ್ಗೆ ಕ್ರಮ ಕೈ ಗೊಳ್ಳಲಾಗಿದೆ. ನಾವು ವಿಶ್ವಾಸದಿಂದ ಸಾಲ ವಿತರಿಸಲಾಗಿದೆ.

ಸಂಘದ ಅಭಿವೃದ್ಧಿ ಬಗ್ಗೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು. ನೂತನ ಸಿಬ್ಬಂದಿಗಳ್ಳನ್ನು ನೇಮಿಸಲಾಗಿದೆ. ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಸಂಘ ಕಾರ್ಯಾಚರಿಸುವ ಕಟ್ಟಡ ತೆರವು ಗೊಳ್ಳಲಿದ್ದು ಸಂಘದ ಕಚೇರಿ ಸ್ಥಳಾoತರ ಗೊಳ್ಳಲಿದೆ ಎಂದು ಸಭೆಗೆ ತಿಳಿಸಿದರು.

ಸಂಘದ ಉಪಾಧ್ಯಕ್ಷ ಎಂ ಪರಮೇಶ್ವರ ಭಟ್,ನಿರ್ದೇಶಕರುಗಳಾದ ಕೆ. ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್ ಕೆ., ಜಿ.ಪಿ. ಶ್ಯಾಮ ಭಟ್, ವೆಂಕಪ್ಪಯ್ಯ, ಉದಯಶಂಕರ್, ಸುಮಂಗಲ ಕೆ., ಶ್ರೀದೇವಿ ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳುಶ್ರೇಯ ಎಸ್‌.ವರದಿ ಹಾಗೂ ನಡವಳಿ ಓದಿದರು. ಸಂಘದ ಅಭಿವೃದ್ಧಿಗಳ ಬಗ್ಗೆ ಸದಸ್ಯರು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here