







ಪುದುವೆಟ್ಟು: ಪುದುವೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಪುದುವೆಟ್ಟು ಇದರ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟೆಂಬರ್ 17, 2025ರ ಗುರುವಾರದಂದು ಸಂಘದ ಆವರಣದಲ್ಲಿ ಜರುಗಿತು
.ಸಂಘದ ಅಧ್ಯಕ್ಷರಾದ ಸಜೀವ್ ಖಂಡಿಗ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣಾಧಿಕಾರಿ ಸಂದೀಪ್ ಜೈನ್ ಅವರು ಸಭೆಗೆ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಸಂಘದ ಕಾರ್ಯದರ್ಶಿಯವರು ವಾರ್ಷಿಕ ವರದಿಯನ್ನು ಮಂಡಿಸಿ ಓದಿದರು.


ಶೇ. 65ರಷ್ಟು ಬೋನಸ್ ಘೋಷಣೆ:ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ ರೂ. 3,96,409.15 ವಾರ್ಷಿಕ ಲಾಭ ಬಂದಿರುವುದಾಗಿ ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಸಂಘದ ಸದಸ್ಯರಿಗೆ ಶೇ. 65ರಷ್ಟು ಲಾಭಾಂಶ (ಬೋನಸ್) ನೀಡುವುದಾಗಿ ಸಭೆಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದು ಸಭೆಯ ಯಶಸ್ವಿಗೆ ಸಹಕರಿಸಿದರು. ಸಂತೋಷ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ನಳಿನಿ ಅವರು ವಂದನಾರ್ಪಣೆಗೈದರು.









