







ಬೆಳ್ತಂಗಡಿ: ಚಾರಣಿಗರ ಪ್ರಮುಖ ಆಕರ್ಷಣೆಯಾದ ಪ್ರಸಿದ್ಧ ‘ಗಡಾಯಿಕಲ್ಲು’ (ನರಸಿಂಹಗಡ )ಚಾರಣ ತಾಣವು ಪ್ರವಾಸಿಗರಿಗೆ ಅಧಿಕೃತವಾಗಿ ಮುಕ್ತಗೊಂಡಿದೆ.


ಮಳೆಗಾಲದ ಹಿನ್ನೆಲೆಯಲ್ಲಿ ಹಾಗೂ ಇಲಾಖೆಯ ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಚಾರಣಕ್ಕೆ, ಈಗ ಅರಣ್ಯ ಇಲಾಖೆ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆಯಿಂದ ಪ್ರವಾಸಿಗರು ಎಂದಿನಂತೆ ಗಡಾಯಿಕಲ್ಲು ಏರಲು ಅವಕಾಶ ನೀಡಲಾಗಿದೆ.









