ಪಡಂಗಡಿ: ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.23,90,724 ಲಾಭ: ರೂ. 5.10ಕೋಟಿ ವ್ಯವಹಾರ

0

ಪಡಂಗಡಿ: ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸಾಮಾನ್ಯ ಸಭೆಯು ಸೆ.11ರಂದು ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮೃದ್ಧಿ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಸುಂದರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಸಂಘವು ಆರ್ಥಿಕ ವರ್ಷದಲ್ಲಿ ರೂ. 5.10ಕೋಟಿ ವ್ಯವಹಾರ ಮಾಡಿ ರೂ. 23,90,724ಲಕ್ಷ ನಿವ್ವಳ ಲಾಭಗಳಿಸಿದೆ ಸದಸ್ಯರಿಗೆ 65% ಬೋನಸ್, 25% ಡಿವಿಡೆಂಡ್ ನೀಡಲಾಗುವುದು ಎಂದರು.ಸಂಘವು ಆರ್ಥಿಕ ವರ್ಷದಲ್ಲಿ ಮಂಗಳೂರು ಎಸ್ ಡಿ ಸಿ ಸಿ ಬ್ಯಾಂಕ್ ಮಹಾ ಸಭೆಯಲ್ಲಿ ಜಿಲ್ಲೆಯ ಒಟ್ಟು 731ಸಂಘದದಲ್ಲಿ ಪಡಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕಾರಗೊಂಡಿದೆ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಭಿವೃದ್ಧಿಗೆ ಹಲವರ ಸಹಕಾರ ಇದೆ. ಪ್ರಸ್ತುತ ಸಂಘವು 3200 ಲೀಟರ್ ಹಾಲು ಸಂಗ್ರಹಿಸುತ್ತಿದೆ. ಸಂಘಕ್ಕೆ ಅತೀ ಹೆಚ್ಚು ಸದಸ್ಯರು ಅತ್ಯಧಿಕ ಹಾಲು ಪೂರೈಸಿದರಿಂದ ಒಳ್ಳೆಯ ಲಾಭಬರಲು ಸಾಧ್ಯವಾಗಿದೆ.

ಸಂಘಕ್ಕೆ ಅತೀ ಹೆಚ್ಚಿನ ಹಾಲು ಪೂರೈಸಿದ ಸಂಘದ ಸದಸ್ಯರುಗಳಾದ ಪ್ರಥಮ ಸುಜಾತಾ, ದ್ವಿತೀಯ ಬಾಲಕೃಷ್ಣ ಅವರನ್ನು ಗೌರವಿಸಲಾಯಿತು. 2025-26ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ ಪರಿಕ್ಷೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಮರಣ ಸಾಂತ್ವನ ನಿಧಿ ವಿತರಿಸಲಾಯಿತು. 5ಮಂದಿ ಅತೀ ಹೆಚ್ಚು ಹಾಲು ಪೂರೈಸಿದ ಉತ್ತಮ ಹೈನುಗಾರರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಕೆ. ಸುಬ್ರಮಣ್ಯ ಭಟ್, ನಿರ್ದೇಶಕರಾದ ಮ್ಯಾಕ್ಸಿಮ್ ಸಿಕ್ವೆರಾ,ಶ್ರೀಧರ ಪೂಜಾರಿ, ಕುಂಜಪ್ಪ ಮೂಲ್ಯ, ಜಯರಾಜ್ ಬಿ., ದೇಜಪ್ಪಕೆ., ಬಾಜಿಲ್ ಫೆರ್ನಾoಡಿಸ್, ವಸಂತ ಪೂಜಾರಿ, ಸುಂದರ ಪೂಜಾರಿ, ಅಣ್ಣು ನಾಯ್ಕ, ಪ್ರಸಾದ್, ಶ್ವೇತಾ, ಅಮಿತ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಮೇಬಲ್ ಕ್ರಾಸ್ತಾ ವರದಿ ಮತ್ತು ಲೆಕ್ಕಾ ಮಂಡಿಸಿದರು. ನಿರ್ದೇಶಕ ಮ್ಯಾಕ್ಸಿಮ್ ಸಿಕ್ವೆರಾ ಸ್ವಾಗತಿಸಿ, ನಿರ್ದೇಶಕ ಶ್ರೀಧರ್ ವಂದಿಸಿ ನಿವೃತ್ತ ಶಿಕ್ಷಕ ಶಿವಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಪವಿತ್ರ, ಪ್ರವೀಣ್ ಮೋನಿಸ್, ಗುಲಾಬಿ, ಹೊನ್ನಪ್ಪ ಕುಲಾಲ್ ಸಹಕರಿಸಿದರು.

ಉತ್ತಮ ಹೈನುಗಾರರಿಗೆ ಸನ್ಮಾನ: ವೇಣೂರು ಎಸ್ ಡಿ ಎಂ ಐ ಟಿ ಐ ಶಿಕ್ಷಕ ಉತ್ತಮ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಪೀಟರ್ ಸಿಕ್ವೆರಾ, ಹೈನುಗಾರಿಕೆ ಮತ್ತು ಮಲ್ಲಿಗೆ ಕೃಷಿಯಲ್ಲಿ ಸಾಧನೆ ಮಾಡಿದ ಯಶೋಧ, ವೈದ್ಯಕೀಯ ವೃತ್ತಿ, ಜೇನು ಕೃಷಿ ಡಾ. ಶಾನ್ ಸಿಕ್ವೆರಾ, ಕಾನೂನು ಪದವಿ ಪಡೆದ ಯುವ ವಕೀಲೆ, ಅಂತಿಮ ಪರೀಕ್ಷೆಯಲ್ಲಿ 3ನೇ ರಾಂಕ್ ಗಳಿಸಿದ ಜೋಷ್ಮ ಲೀರಾ ಮೋನಿಸ್ ಇವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here