







ಪಡಂಗಡಿ : ಆಗಸ್ಟ್ ತಿಂಗಳಲ್ಲಿ ನಡೆದ 2102ನೇ ಮದ್ಯವರ್ಜನ ಶಿಬಿರದ ಪ್ರಥಮ ಮಾಸಿಕ ಸಭೆ ಪಡಂಗಡಿ ಶ್ರೀ ಗಣಪತಿ ಸಭಾಭವನದಲ್ಲಿ ನಡೆಯಿತು.

ಯೋಜನಾಧಿಕಾರಿ ಶl ಹರೀಶ್ ರವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಹೊಸ ಜೀವನ ನಡೆಸುತ್ತಿರುವ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು 2102ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ವಹಿಸಿ ಶುಭ ಹಾರೈಸಿದರು ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸಭೆಯಲ್ಲಿ ನವಜೀವನ ಸಮಿತಿ ಬಲವರ್ಧನೆ ಮತ್ತು ಅನು ಪಾಲನೆ, ನವಜೀವನ ಸಮಿತಿ ಸದಸ್ಯರ ವಾರದ ಸಭೆಯ ವರದಿ, ಹಾಜರಾತಿ ಕುರಿತು ,ಫ್ರೀ ಕಾನ್ಫರೆನ್ಸ್ ಸಭೆ, ಶತದಿನೋತ್ಸವ ಕುರಿತು ಮಾಹಿತಿ ನೀಡಿದರು .


ಮುಖ್ಯ ಅತಿಥಿಗಳಾದ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ. ಎಸ್. ಗಿರೀಶ್, ಜನಜಾಗೃತಿ ವೇದಿಕೆ ಸದಸ್ಯ ರಿಚರ್ಡ್ ಗೋವಿಯಸ್, ಜನಜಾಗೃತಿ ವಲಯಾಧ್ಯಕ್ಷ ಹರೀಶ್ ಕೋಟ್ಯಾನ್, ವ್ಯವಸ್ಥಾಪನ ಸಮಿತಿ ಸದಸ್ಯ ಭಾಸ್ಕರ, ಶಿಬಿರದ ಯೋಗ ಶಿಕ್ಷಕ ಡಾ . ದ್ವಿತಿ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಹಿರಿಯ ನವಜೀವನ ಸಮಿತಿ ಸದಸ್ಯ ಮೋಹನ್ ಉಪಸ್ಥಿತರಿದ್ದು ಶುಭ ಹಾರೈಸಿದರುಶಿಬಿರಕ್ಕೆ ಸೇರಿ ಪಾನಮುಕ್ತರಾದ ನವ ಜೀವನ ಸಮಿತಿ ಸದಸ್ಯರು ತಮ್ಮ ಒಂದು ತಿಂಗಳ ಪಾನಮುಕ್ತ ಜೀವನದ ಅನುಭವಗಳನ್ನು ಹಂಚಿಕೊಂಡರು.
ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತುವಲಯ ಮೇಲ್ವಿಚಾರಕಿ ಶ್ರೀಮತಿ ಯಶೋಧ ಸ್ವಾಗತಿಸಿ , ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ. ನಿರೂಪಿಸಿ ವಂದಿಸಿದರು









