ಬೆಳಾಲು: ಮೈತ್ರಿ ಯುವಕ ಮಂಡಲದ ವತಿಯಿಂದ ಮೊಸರು ಕುಡಿಕೆ ಉತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಸ್ತಾಂತರ​

0

ಬೆಳಾಲು: ಸ್ಥಳೀಯ ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರುಗಿದ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭವು ಸೆಪ್ಟೆಂಬರ್ 06 ರಂದು ಯುವಕ ಮಂಡಲದ ವಠಾರದಲ್ಲಿ ನೆರವೇರಿತು.​

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡೈನಾ ಪ್ರವೀಣ್ ವಿಜಯ್ ಪಾರಳ ಅವರು, ಬೆಳಾಲು ಗ್ರಾಮದ ಕಡುಬಡತನದ ಹಿನ್ನೆಲೆಯುಳ್ಳ ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ಮುಂದಿನ ವಿದ್ಯಾಭ್ಯಾಸಕ್ಕೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಪ್ರೋತ್ಸಾಹ ಧನ ಸಹಾಯವನ್ನು ಹಸ್ತಾಂತರಿಸುವ ಮೂಲಕ ಮಾದರಿಯಾದರು.​

ಈ ಸಮಾರಂಭದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಬಜಪೆ ವಲಯ ಯೋಜನಾಧಿಕಾರಿಗಳಾದ ಗಿರೀಶ್ ಎಂ., ಜುಬೈರ್ ಅನಂತೋಡಿ, ಮೈತ್ರಿ ಯುವಕ ಮಂಡಲದ ಅಧ್ಯಕ್ಷ ನವನೀತ್ ಗೌಡ, ಗೌರವ ಸಲಹೆಗಾರರು ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜತ್ತನ್ನ ಗೌಡ, ಗೌರವಾಧ್ಯಕ್ಷ ನಿತಿನ್ ಮೋನಿಸ್ ಹಾಗೂ ಕಾರ್ಯದರ್ಶಿ ಕಿರಣ್ ಸುವರ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here