






ಬೆಳ್ತಂಗಡಿ : ಬೈಂದೂರಿನ ಗೋಳಿಹೊಳೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ರಾಮ ಕ್ಷೇತ್ರದ ಮಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆಗೆ ಉಜಿರೆ ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಸೆ. 6ರಂದು ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.



ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಕೆ., ಉಪಾಧ್ಯಕ್ಷ ಸೀತಾರಾಮ ವಿ., ನಿರ್ದೇಶಕರುಗಳಾದ ತುಕಾರಾಮ ಸಾಲಿಯಾನ್, ಹರೀಶ್ ಸುವರ್ಣ, ಸೇಸಪ್ಪ ಪೂಜಾರಿ, ನೊಣಯ್ಯ ಪೂಜಾರಿ , ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಮೋದ್ ಕುಮಾರ್, ಸಿಬ್ಬಂದಿ ಪುರುಷೋತ್ತಮ ಕೋಟ್ಯಾನ್ ಉಪಸ್ಥಿತರಿದ್ದರು. ಬ್ರಹ್ಮಾನಂದ ಶ್ರೀಗಳು ಇವರನ್ನು ಗೌರವಿಸಿದರು.









