ಮೋನಿಷಾ ರಸ್ಕಿನ್ಹಾಗೆ ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠಂನಿಂದ ಚಿನ್ನದ ಪದಕ

0

ಉಜಿರೆ : ನಡ ಗ್ರಾಮದ ಸುರ್ಯ ನಿವಾಸಿಗಳಾದ ಮೋವಿನ್ ರಸ್ಕಿನ್ಹಾ ಹಾಗೂ ಜೆಸಿಂತಾ ರಸ್ಕಿನ್ಹಾ ಅವರ ಪುತ್ರಿ ಮೋನಿಷಾ ರಸ್ಕಿನ್ಹಾ ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠಂ ಸಂಸ್ಥೆಯಲ್ಲಿ ಐದು ವರ್ಷಗಳ ಅಧ್ಯಯನದ ಅವಧಿಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನ ಪಡೆದು, ದೃಶ್ಯ ಸಂವಹನ ವಿಭಾಗದಲ್ಲಿ (ಡಿಜಿಟಲ್‌ ಚಲನಚಿತ್ರ ನಿರ್ಮಾಣ ವಿಶೇಷತೆಯೊಂದಿಗೆ) ಸಮಗ್ರ ಎಂ.ಎಸ್ಸಿ ಪದವಿ ಪಡೆದು ಚಿನ್ನದ ಪದಕ ಪುರಸ್ಕೃತಗೊಂಡಿದ್ದಾರೆ.

ಇವರು ಉಜಿರೆ ಐ ಸಿ ವೈ ಯಂ ಉಜಿರೆ ಘಟಕದ ಅಧ್ಯಕ್ಷೆಯಾಗಿ ಸೆ. 30ರಂದು ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿವಸ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಿ ಯಶಸ್ವಿ ಕಂಡಿದ್ದಾರೆ.

LEAVE A REPLY

Please enter your comment!
Please enter your name here