






ಗೇರುಕಟ್ಟೆ : ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಸೆ.6 ರಂದು ಸಂಘದ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ನಡೆಯಿತು.

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಇತಿಹಾಸದಲ್ಲಿ ಈ ಬಾರಿ ಗರಿಷ್ಠ ಲಾಭ ಮಾಡಿದ್ದೇವೆ.ಪ್ರಸಕ್ತ ಸಾಲಿನಲ್ಲಿ ರೂ.337.83 ಕೋಟಿ ವ್ಯವಹಾರ ನಡೆಸಿ,ರೂ.1.41 ಕೋಟಿ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ 17 ಶೇಕಡಾ ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ವಸಂತ ಮಜಲು ಘೋಷಿಸಿದರು.
ಸಾಧಕರಿಗೆ ಸನ್ಮಾನ- ಗೌರವ:ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಾದ ನಾಳ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಆಸ್ರಣ್ಣ, ನಿವೃತ್ತ ಪ್ರಾಂಶುಪಾಲ ದಿವಾಕರ ಆಚಾರ್ಯ, ಬೆಳ್ತಂಗಡಿ ರಾಘವೇಂದ್ರ ಸ್ವಾಮಿ ಮಠದ ಅರ್ಚಕ ರಾಘವೇಂದ್ರ ಬಾಂಗಿಣ್ಣಾಯ ಹಾಗೂ ಸೌಭಾಗ್ಯ ಭಟ್ ಅವರನ್ನು ಗೌರವಿಸಲಾಯಿತು.


41 ವರ್ಷಗಳಿಂದ ಸಂಘದಲ್ಲಿ ಪಡಿತರ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿವರಾಮ ನಾಯ್ಕ ಅವರನ್ನು ಸನ್ಮಾನಿಸಲಾಯಿತು ಹಾಗೂ ಸಂಘದ ವಠಾರದಲ್ಲಿ ನೀರು ಖಚಿತವಾಗಿ ತಿಳಿದು ಸಂಶೋಧನೆ ಮಾಡಿ ಕೊಳವೆ ಬಾವಿಯ ಕೊರೈಯಿಸಿದ ಬಂದಾರು ಜನಾರ್ದನ ಗೌಡ ನಿರ್ಮುಡ ಅವರನ್ನು ಸನ್ಮಾನಿಸಿ, ಗೌರವಿಸಿದರು.
- ಸಂಘದ ಮಳಿಗೆಯಿಂದ ಅತೀ ಹೆಚ್ಚು ರಾಸಾಯನಿಕ, ಕೃಷಿ ಉತ್ಪನ್ನ ,ಪರಿಕರ ಸಾಮಾಗ್ರಿಗಳನ್ನು ಖರೀದಿ ಮಾಡಿದ ಕೃಷಿಕರನ್ನು ಗೌರವಿಸಲಾಯಿತು.ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾಜ್ ಪ್ರಕಾಶ್, ನಿರ್ದೇಶಕರಾದ ಯಂ ಹರಿದಾಸ ಪಂಡತ್ತಾಯ, ಶೇಖರ್ ನಾಯ್ಕ, ಚಂದ್ರಾವತಿ, ಮಮತಾ, ಗೋಪಾಲ ನಾಯ್ಕ್, ಕುಶಾಲಪ್ಪ ಗೌಡ, ಬಾಲಕೃಷ್ಣ ಗೌಡ ಬಿರ್ಮೊಟ್ಟು, ಉದಿತ್ ಕುಮಾರ್, ಲೋಕೇಶ್ ನಾಳ, ಕೇಶವ ಪೂಜಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಶೆಟ್ಟಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಸಿಬ್ಬಂದಿ ಜಗನ್ನಾಥ ಪ್ರಾರ್ಥಿಸಿದರು, ಶೇಖರ್ ನಾಯ್ಕ್ ಸ್ವಾಗತಿಸಿ, ಸಿಬ್ಬಂದಿ ಸಂತೋಷ್ ಕುಮಾರ್ ಲೆಕ್ಕ ಪತ್ರ ಮಂಡನೆ ಮಾಡಿದರು, ಉಮೇಶ್ ನಿರೂಪಿಸಿ, ಸಂತೋಷ್ ಕುಮಾರ್ ವಂದಿಸಿದರು.









