ಬೈಂದೂರು ಗೋಳಿಹೊಳೆಯಲ್ಲಿ ಚಾತುರ್ಮಾಸ್ಯ ವೃತ: ಕನ್ಯಾಡಿ ಮಹಾ ಮಂಡಲೇಶ್ವರ ಬ್ರಹ್ಮಾನಂದ ಶ್ರೀಗಳಿಗೆ ಸುದ್ದಿ ಬಿಡುಗಡೆ ತಂಡದಿಂದ ಗೌರವ ನಮನ ಬ್ರಹ್ಮಾನಂದ ಶ್ರೀಗಳಿಂದ ಸುದ್ದಿ ಬಿಡುಗಡೆ ತಂಡಕ್ಕೆ ಆಶೀರ್ವಾದ, ಮೆಚ್ಚುಗೆ

0

ಬೆಳ್ತಂಗಡಿ:ಆಧ್ಯಾತ್ಮ, ಸಮಾಜ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ, ಮಹಾಮಂಡಲೇಶ್ವರ 1008 ಸದ್ಗುರು ಬ್ರಹ್ಮಾನಂದ ಸರಸ್ವತಿ ಶ್ರೀಗಳು ಪ್ರಸ್ತುತ ಬೈಂದೂರಿನ ಗೋಳಿಹೊಳೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವೃತಾಚರಣೆ ಕೈಗೊಂಡಿದ್ದಾರೆ.

ತಿಂಗಳ ಪರ್ಯಂತ ನಡೆಯುವ ಈ ಪವಿತ್ರ ಚಾತುರ್ಮಾಸ್ಯ ವೃತದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ನಂಬರ್ ಒನ್ ಜನಪ್ರಿಯ ಪತ್ರಿಕೆ ಹಾಗೂ ಚಾನೆಲ್ ಆದ ಸುದ್ದಿ ಬಿಡುಗಡೆ ತಂಡ ಬೈಂದೂರಿಗೆ ತೆರಳಿ ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು.

ಪತ್ರಿಕಾ ಧರ್ಮದ ಬಗ್ಗೆ ಶ್ರೀಗಳಿಂದ ಮೆಚ್ಚುಗೆ ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ತಂಡ ಶ್ರೀಗಳೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿತು. ಬೆಳ್ತಂಗಡಿ ತಾಲೂಕಿನಲ್ಲಿ ಸುದ್ದಿ ಬಿಡುಗಡೆ ನಡೆಸುತ್ತಿರುವ ವಸ್ತುನಿಷ್ಠ, ಜನಪರ ಕಾರ್ಯವನ್ನು ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದರು. ಸತ್ಯದ ಪರವಾಗಿ, ಧರ್ಮದ ಪರವಾಗಿ ಪತ್ರಿಕಾ ರಂಗ ಕೆಲಸ ಮಾಡಬೇಕು. ಜನರ ಕಷ್ಟಗಳಿಗೆ ಧ್ವನಿಯಾಗಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.

ತಂಡದ ಎಲ್ಲರಿಗೂ ಆಶೀರ್ವಾದದ ಜೊತೆಗೆ ಪ್ರಸಾದ ನೀಡಿದರು.ಬೆಳ್ತಂಗಡಿ ತಾಲೂಕಿನ ಜನತೆಗೆ ಚಾತುರ್ಮಾಸ್ಯದ ಶುಭಾಶಯಗಳನ್ನು ತಿಳಿಸಿದ ಶ್ರೀಗಳು,ಸುದ್ದಿ ಬಿಡುಗಡೆ ಚಾನೆಲ್‌ನ ಮುಖ್ಯಸ್ಥರಾದ ದಾಮೋದರ್ ದೊಂಡೋಲೆ, ವ್ಯವಸ್ಥಾಪಕ ಸಂದೀಪ್, ವರದಿಗಾರರಾದ ನಿಶಾನ್ ಬಂಗೇರ, ಪ್ರಸಾದ್, ಸುವಿರ್ ಜೈನ್, ವನೀಶ್ ಅವರು ಈ ಭೇಟಿಯಲ್ಲಿ ಉಪಸ್ಥಿತರಿದ್ದರು.ಶ್ರೀಗಳ ಚಾತುರ್ಮಾಸ್ಯ ವೃತ ಯಶಸ್ವಿಯಾಗಿ ನೆರವೇರಲಿ ಎಂದು ಸುದ್ದಿ ಬಿಡುಗಡೆ ತಂಡ ಪ್ರಾರ್ಥಿಸಿತು.

LEAVE A REPLY

Please enter your comment!
Please enter your name here